February 3, 2026

ಉಳ್ಳಾಲ: ಎಂಡಿಎಂಎ ಮಾದಕ ವಸ್ತು ಮಾರಾಟ: ಇಬ್ಬರು ಪೊಲೀಸರ ವಶಕ್ಕೆ

0
IMG-20230917-WA0000.jpg



ಉಳ್ಳಾಲ: ಬೈಕಿನಲ್ಲಿ ಬಂದು ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಹಣಕ್ಕಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರ ತಂಡ ಬಂಧಿಸಿದ್ದಾರೆ.

ತ್ರಿಶೂರ್ ವಡಕಂಚೇರಿ ನಿವಾಸಿ ಶೇಕ್ ತನ್ಸಿರ್ (20) ಮತ್ತುಕೋಝಿಕ್ಕೋಡ್ ಕಡಮೇರಿ ನಿವಾಸಿ ಸಾಯಿಕೃಷ್ಣ ( 19) ಬಂಧಿತರು. ಇಬ್ಬರಿಂದ 2.77 ಗ್ರಾಂ ತೂಕದ ನಿಷೇಧಿತ ಎಂಡಿಎಂಎ , ಎರಡು ಮೊಬೈಲ್ ಹಾಗೂ ರೂ. 50,000 ಬೆಲೆಬಾಳುವ ಎಫ್ ಝೆಡ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!