February 4, 2026

ಇಂಡೋನೇಷ್ಯಾದ‌ಲ್ಲಿ ಹತ್ತನೇ ಅಂತರಾಷ್ಟ್ರೀಯ ಶಿಟೋ-ರಿಯೊ ಚಾಂಪಿಯನ್ ಶಿಪ್: ಭಾರತವನ್ನು ಪ್ರತಿನಿಧಿಸಲಿರುವ ಶುಭಂ ಎಸ್ ಅಂಚನ್ ಮತ್ತು ಅರ್ಜುನ್ ದಿನೇಶ್

0
IMG-20230916-WA0010.jpg

ಇಂಡೋನೇಷ್ಯಾದ‌ ಜಕಾರ್ತದಲ್ಲಿ ನಡೆಯಲಿರುವ ಹತ್ತನೆ ಅಂತರಾಷ್ಟ್ರೀಯ ಶಿಟೋ-ರಿಯೊ ಚಾಂಪಿಯನ್ಶಿಪ್ ಗೆ 21 ವರ್ಷ -75KG ಕೆ.ಜಿ ವಿಭಾಗದಲ್ಲಿ ಶುಭಂ ಎಸ್ ಅಂಚನ್ ಮತ್ತು 17 ವರ್ಷದ -55 ಕೆ.ಜಿ ಅರ್ಜುನ್ ದಿನೇಶ್ ಆಯ್ಕೆಯಾಗಿದ್ದು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳು (Nitte education trust ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ) ಕರಾಟೆ ಮೇಲ್ವಿಚಾರಕರು ಮತ್ತು ದಕ್ಷಿಣಕನ್ನಡ ಕರಾಟೆ ಅಸೋಸಿಯೇಷನ್ನ ಟೆಕ್ನಿಕಲ್ ಡೈರೆಕ್ಟರ್ ಆದ ವಿಕ್ಟರ್‌ ಡಿಸೋಜ ಇವರು ತರಬೇತಿ ನೀಡಿದ್ದಾರೆ.

ಈ ವಿಷಯವಾಗಿ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ದಕ್ಷಿಣಕನ್ನಡ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಈಶ್ವರ್ ಕಟೀಲ್ ರವರು ಸುದ್ದಿಗೋಷ್ಠಿ ನಡೆಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿ ಖುಷಿ ವ್ಯಕ್ತಪಡಿಸಿದರು ಮತ್ತು ನಿಟ್ಟೆ ಶಂಕರ್ ಆಡ್ಯಂತಾಯ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ Dr.ನವೀನ್ ಶೆಟ್ಟಿ ಕೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!