March 22, 2026

ವಿಟ್ಲ: ರಿಕ್ಷಾದಲ್ಲಿ ಭಾರೀ ಪ್ರಮಾಣದ ಗಾಂಜಾ ಸಾಗಾಟ: ಸುಳ್ಯ ನಿವಾಸಿ ಪೊಲೀಸರ ವಶಕ್ಕೆ

0
IMG-20230916-WA0041.jpg

ವಿಟ್ಲ: ಕರ್ನಾಟಕ ಕೇರಳ ಗಡಿಭಾಗದಲ್ಲಿ ಭಾರೀ ಪ್ರಮಾಣದಲ್ಲಿ ರಿಕ್ಷಾವೊಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ವಿಟ್ಲ ಪೊಲೀಸರು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಳ್ಯ ನಿವಾಸಿಯಾದ ಎನ್ ಎಂ ಮಹಮ್ಮದ್ ಕಲಂದರ್ ಶಾ (36) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಕಲ್ಲಡ್ಕ ಸಾರಡ್ಕ ರಸ್ತೆಯ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ಅಟೋರಿಕ್ಷಾದಲ್ಲಿ ನಿಷೇಧಿತ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿಯ ಆಧಾರದಲ್ಲಿ ಪತ್ತೆ ಹಚ್ಚಿದ್ದಾರೆ.

ರಿಕ್ಷಾದಲ್ಲಿ 6.110 ಕೆ ಜಿ ತೂಕದ ಗಾಂಜಾ ಪತ್ತೆಯಾಗಿದ್ದು, ಆರೋಪಿಯಲ್ಲಿದ್ದ ಎರಡು ಮೊಬೈಲ್ ಫೊನ್, 900ರೂ ನಗದು, ಚಾಲನಾ ಪರವಾನಿಗೆ ಹಾಗೂ ರಿಕ್ಷಾವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!