May 13, 2026

ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ತ್ರೋಬಲ್ ಪಂದ್ಯಾಟ

0
IMG-20230912-WA0049.jpg

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಮತ್ತು ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ವತಿಯಿಂದ ವಿಟ್ಲ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ತ್ರೋಬಲ್ ಪಂದ್ಯಾಟ ೨೦೨೩-೨೪ ಜನಪ್ರಿಯ ಶಾಲಾ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜನಪ್ರಿಯ ಅಧ್ಯಕ್ಷೆ ಫಾತಿಮಾ ನಸ್ರಿನಾ ಬಶೀರ್ ಉದ್ಘಾಟಿಸಿದರು. ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುನೀತ್ ಮಾಡತ್ತಾರು ಕಾರ್ಯಕ್ರನಕ್ಕೆ ಶುಭ ಹಾರೈಸಿದರು.

ವಿಟ್ಲ ಕ್ಲಷ್ಟರ್ ದೈಹಿಕ ಶಿಕ್ಷಣ ನೋಡಲಾಧಿಕಾರಿ ರಾಜೇಂದ್ರ ರೈ, ದ.ಕ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಪಡಿಬಾಗಿಲು, ಸಿಆರ್‌ಪಿ ಜ್ಯೋತಿ, ಜನಪ್ರಿಯ ಸೆಂಟ್ರಲ್ ಸ್ಕೂಲ್ ನಿರ್ದೇಶಕ ನೌಸೀನ್ ಬದ್ರಿಯಾ, ಪ್ರಾಂಶುಪಾಲ ಲಿಬಿನ್ ಝೇವಿಯರ್, ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಉಪಸ್ಥಿತರಿದ್ದರು.
ಶಿಕ್ಷಕಿ ಝರೀನ ಸ್ವಾಗತಿಸಿದರು. ಅರ್ಚನ ವೇಗಸ್ ವಂದಿಸಿದರು. ದಿವ್ಯಾ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!