March 22, 2026

ಮಂಗಳೂರು: ಹೊಟೇಲ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಬ್ಯಾಂಕ್ ಅಧಿಕಾರಿಯ ಮೃತದೇಹ ಪತ್ತೆ

0
image_editor_output_image1454876008-1694412139584.jpg

ಮಂಗಳೂರು: ಹೊಟೇಲ್ ನ ಈಜು ಕೊಳವೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಈ ಘಟನೆ ನಡೆದಿದೆ.

ಸ್ಮಿಮ್ಮಿಂಗ್ ನಲ್ಲಿ ಮುಳುಗಿ‌ ಬ್ಯಾಂಕ್‌ ಅಧಿಕಾರಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ‌

ಮೃತ ವ್ಯಕ್ತಿ ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್ ನಾಯರ್ ಎಂದು ಗುರುತಿಸಲಾಗಿದೆ.

ಯುನಿಯನ್ ಬ್ಯಾಂಕ್ ಅಧಿಕಾರಿ ಯಾಗಿರುವ ಗೋಪು ಆರ್ ನಾಯರ್ ನಿನ್ನೆ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ಉಳಿದು ಕೊಂಡಿದ್ದರು. ಇಂದು ಬೆಳಿಗ್ಗೆ 4 ಗಂಟೆಗೆ ಹೊಟೇಲ್ ರೂಮ್ ನಿಂದ ಹೊರ ಹೋಗಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!