March 15, 2026

ಮಂಗಳೂರು: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
IMG-20230906-WA0000.jpg



ಮಂಗಳೂರು: ಕಳೆದ 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ, ಹಲವು ಪ್ರಕರಣಗಳ ಆರೋಪಿಯನ್ನು ಮಂಗಳೂರು ನಗರದ ಬಂದರು ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.


ನಗರದ ನ್ಯೂ ಚಿತ್ರ ಟಾಕೀಸ್ ಸಮೀಪದ ಸುಬ್ಬಯ್ಯಶೆಟ್ಟಿ ಕಂಪೌಂಡ್ ನ ನಿವಾಸಿ ರಾಜೇಶ್ ನ(52) ಬಂಧಿತ ಆರೋಪಿಯಾಗಿದ್ದಾನೆ.

ಈತನ ವಿರುದ್ದ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಕೇರಳದ ಕಾಸರಗೋಡಿನಲ್ಲಿ ಬಂದರು ಠಾಣಾ ಎಎಸ್‌ಐ ಓಂ ದಾಸ್ ಮತ್ತು ಹೆಡ್ ಕಾನ್ಸ್‌ಟೇಬಲ್ ಮಚ್ಚೇಂದ್ರನಾಥ ಅವರು ಆರೋಪಿ ರಾಜೇಶ್‌ನನ್ನು ಬಂಧಿಸಿ ಮಂಗಳೂರಿಗೆ ಕರೆ ತಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!