March 22, 2026

ಉಳ್ಳಾಲ: ಗಾಂಜಾ ಸಿಗದೆ ಜಿಗುಪ್ಸೆ: ಬೈಕ್ ಕಳವು ಆರೋಪಿ ನೇಣಿಗೆ ಶರಣು
 

0
image_editor_output_image-311825556-1693916682570.jpg


ಉಳ್ಳಾಲ : ಬೈಕ್ ಕಳವುಗೈದು ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿಯೊಬ್ಬ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.

ತಲಪಾಡಿ ಗ್ರಾಮದ ನಾರ್ಲ ಪದವು ನಿವಾಸಿ ಪೈಝಲ್(24) ಆತ್ಮಹತ್ಯೆಗೈದ ಯುವಕ.

ಗಾಂಜಾ ವ್ಯಸನಕ್ಕೆ ಬಲಿಯಾಗಿದ್ದ ಯುವಕ ಸೇದಲು ಗಾಂಜಾ ಸಿಗದೆ ಜಿಗುಪ್ಸೆಗೊಂಡು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಫೈಝಲ್ ಇಂದು ಬೆಳಗ್ಗೆ ತನ್ನ ಮನೆಯ ಮೊದಲ ಅಂತಸ್ತಿನ ಕೊಠಡಿಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ಕುಣಿಕೆ ಬಿಗಿದು ಆತ್ಮಹತ್ಯೆಗೈದಿದ್ದು, ಮನೆಯಲ್ಲಿ ಫೈಸಲ್ ತಾಯಿ, ತಂಗಿ ಮತ್ತು ಅಜ್ಜಿ ಇದ್ದು ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಫೈಝಲ್ ನಿತ್ಯವೂ ಬೆಳಗ್ಗೆ 9ರಿಂದ 10 ಗಂಟೆ ಅವಧಿಯಲ್ಲಿ ಗಾಂಜಾ ಸೇದುವ ಚಟ ಬೆಳೆಸಿದ್ದು, ಇಂದು ಗಾಂಜಾ ಸಿಗದ ಕಾರಣದಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಗೈದಿರುವುದಾಗಿ ತಿಳಿದುಬಂದಿದೆ.

ಬೈಕ್ ಕಳವು ಪ್ರಕರಣದಲ್ಲಿ ಫೈಝಲ್ ನನ್ನ ಪೊಲೀಸರು ಬಂಧಿಸಿದ್ದು ಮೃತ ಫೈಝಲ್ ಪ್ರಕರಣವನ್ನ ಎದುರಿಸುತ್ತಿದ್ದ. ಉಳ್ಳಾಲ ಠಾಣೆಯಲ್ಲಿ ಈತನ ವಿರುದ್ಧ ಗಾಂಜಾ ಸೇವನೆಯ ಕೇಸು ದಾಖಲಾಗಿದೆ.”

Leave a Reply

Your email address will not be published. Required fields are marked *

error: Content is protected !!