ತೋಟಕ್ಕೆಂದು ತೆರಳಿದ್ದ ಮಹಿಳೆ ಶವವಾಗಿ ಪತ್ತೆ

ರಾಮನಗರ: ತೋಟಕ್ಕೆಂದು ಹೋದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾದ ಘಟನೆ ಚನ್ನಪಟ್ಟಣ ತಾಲ್ಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದೆ. ಕೊಲೆ ಶಂಕೆ ವ್ಯಕ್ತವಾಗಿದೆ.
32 ವರ್ಷ ಪ್ರಾಯದ ಶ್ವೇತ.ಸಿ.ಕೆ ಮೃತ ಮಹಿಳೆ. ಇವರು ಸೋಮವಾರ ಮನೆಯಿಂದ ತೋಟಕ್ಕೆಂದು ಹೋಗಿದ್ದು, ಬಳಿಕ ಕಾಣೆಯಾಗಿದ್ದರು. ಇಂದು ಮುಂಜಾನೆ ಅವರದ್ದೆ ತೋಟದ ಪೈಪ್ ಲೈನ್ ಗುಂಡಿಯಲ್ಲಿ ಹೂತ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಹಿಂದೆ ಶ್ವೇತಾ ಗಂಡನ ಮನೆಯವರು ಆಕೆಯ ಜೊತೆ ಹಲವಾರು ಬಾರಿ ಗಲಾಟೆ ಮಾಡಿದ್ದರು. ಅಕ್ಕೂರು ಠಾಣೆಯಲ್ಲಿ ಮೂರು ಬಾರಿ ರಾಜಿ ಸಂಧಾನವೂ ನಡೆದಿದ್ದರು. ಶ್ವೇತ ಅತ್ತೆ, ಮಾವ, ಗಂಡ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಬರುವವರೆಗೂ ಮೃತದೇಹ ಹೊರ ತೆಗೆಯದಂತೆ ಶ್ವೇತ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ