March 15, 2026

ಶಿರ್ವ: ಅಲ್ಪಕಾಲದ ಅನಾರೋಗ್ಯದಿಂದ ಯುವತಿ ನಿಧನ

0
IMG-20230901-WA0000.jpg



ಶಿರ್ವ: ಶಿರ್ವ ಅವರ್ ಲೇಡಿ ಆಫ್ ಹೆಲ್ತ್ ಚರ್ಚ್ ಬಳಿಯ ಕಾನ್ವೆಂಟ್ ರಸ್ತೆಯ ನಿವಾಸಿ, ರಿಯಾನ್ನ ಜೇನ್ ಡಿಸೋಜಾ ಅವರು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

20ರ ಹರೆಯದ ರಿಯಾನ್ನ ಜೇನ್ ಡಿಸೋಜಾ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಕಳೆದ ವರ್ಷ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದರು. ಮಣಿಪಾಲ ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

ವಿದ್ಯಾಭ್ಯಾಸ, ಪಠ್ಯೇತರ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದ ರಿಯಾನ್ನ ಅತ್ಯುತ್ತಮ ಸಂಘಟಕಿಯಾಗಿದ್ದು ಮಾತ್ರವಲ್ಲದೇ, ನರ್ತಕಿ ಮತ್ತು ನೃತ್ಯ ಸಂಯೋಜಕರಾಗಿದ್ದರು.

ಸೇಂಟ್ ಮೇರಿಸ್ ಮತ್ತು ನಿಟ್ಟೆ ಶಿಕ್ಷಣ ಸಂಸ್ಥೆಗಳಲ್ಲಿ ತನ್ನ ಶಿಕ್ಷಣವನ್ನು ಪಡೆದಿದ್ದರು. ಬಿಕಾಂ ಅನ್ನು ಪೂರ್ಣಗೊಳಿಸಿದ ನಂತರ, ಎಂಕಾಂ ವಿದ್ಯಾಭ್ಯಾಸ ಆರಂಭಿಸುವಷ್ಟರಲ್ಲಿ ಕ್ಯಾನ್ಸರ್ ಗೆ ತುತ್ತಾಗಿದ್ದರು.

ವೈಸಿಎಸ್, ಐಸಿವೈಎಂ ಸದಸ್ಯರಾಗಿದ್ದ ಇವರು ತಾಯಿ, ಸಹೋದರ, ಸ್ನೇಹಿತರು ಮತ್ತು ಸಂಬಂಧಿಕರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!