ಕಾರವಾರ: ಮೀನುಗಾರರ ಬಲೆಗೆ ಬಿದ್ದ ಅತಿ ದೊಡ್ಡ ಬಂಗುಡೆ ಮೀನು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಅಪರೂಪಕ್ಕೆ ವಿಶೇಷ ಮೀನುಗಳು ಸಿಗುವ ಮೂಲಕ ಅಚ್ಚರಿಯನ್ನು ಮೂಡಿಸುತ್ತವೆ.
ಈ ಬಾರಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ದೇಶದಲ್ಲೇ ಮೊದಲ ಬಾರಿ ಎಂದು ಹೇಳಲಾಗುತ್ತಿರುವ ಅತಿ ಉದ್ದದ ಹಾಗೂ ಹೆಚ್ಚು ತೂಕದ ಬಂಗುಡೆ ಮೀನು ಮೀನುಗಾರರ ಬಲೆಗೆ ಬಿದ್ದಿದೆ.
ಕಾರವಾರದ ಬೈತಖೋಲ್ ಬಂದರಿನಲ್ಲಿ ನವೀನ್ ಹರಿಕಾಂತ್ರ ಎಂಬುವವರಿಗೆ ಆಳ ಸಮುದ್ರ ಬಿಡ್ಡಬಲೆ ದೋಣಿಗೆ ಈ ಮೀನು ಸಿಕ್ಕಿದೆ.
ಈ ಮೀನನ್ನು ವಿನಾಯಕ್ ಖರೀದಿಸಿ ಕಡಲ ವಿಜ್ಞಾನ ವಿಭಾಗದ ಕೇಂದ್ರಕ್ಕೆ ನೀಡಿದ್ದಾರೆ. ಈ ಮೀನು 19 ಇಂಚು ಉದ್ದ ಮತ್ತು 4.5 ಇಂಚು ಅಗಲ ಇದ್ದು, ಒಂದು ಕೆಜಿ ತೂಕವಿದೆ.