March 22, 2026

ಬೆಳ್ತಂಗಡಿ: ಕಡವೆ ಭೇಟೆಯಾಡಿ ಹತ್ಯೆ: ಕೋವಿ ಸಹಿತ ಮೂವರು ಪೊಲೀಸರ ವಶಕ್ಕೆ

0
IMG-20230824-WA0003.jpg

ಬೆಳ್ತಂಗಡಿ: ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯದ ಒಳಭಾಗದ ಬಟ್ಟಾಡಿ ಬಳಿ ಕಪಿಲಾ ನದಿ ತೀರದಲ್ಲಿ ಮಾಂಸಕ್ಕಾಗಿ ಅಕ್ರಮವಾಗಿ ಕಡವೆ ಭೇಟೆಯಾಡಿದ ಮೂವರನ್ನು ಬಂದೂಕು ಸಹಿತ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಬುಧವಾರ ಡಿಆರ್ ಎಫ್‌ಒ ಸಿ.ಎನ್. ಲೋಕೇಶ್ ಅಶೋಕ್ ,ರಾವುತಪ್ಪ, ಅರಣ್ಯ ಪಾಲಕರಾದ ವಿನಯ ಚಂದ್ರ ಹಾಗೂ ಕಿಶೋರ್ ಗಸ್ತು ನಿರತರಾಗಿದ್ದು, ಖಚಿತ ವರ್ತಮಾನದ ಮೇರೆಗೆ ಕಾದು ಕುಳಿತಿದ್ದರು. ಇದೇ ವೇಳೆ ಬೇಟೆಯಾಡಿದ ಶಬ್ದ ಕೇಳಿದ ಬೆನ್ನಲ್ಲೇ ಕಾಡಿನಲ್ಲಿ ಸುತ್ತುವರಿದು ಆರೋಪಿಗಳನ್ನು ಬಂಧಿಸಿದ್ದರು.

ನಾಲ್ಕು ವರ್ಷದ ಹೆಣ್ಣು ಕಡವೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋವಿ ಸಹಿತ ಆರೋಪಿಗಳಾದ ಸುದೇಶ್ ಪಟ್ರಮೆ, ಪುನೀತ್, ಕೋಟ್ಯಪ್ಪ ಗೌಡ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿ ಲೋಕೇಶ್ ತಲೆಮರೆಸಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!