ಒಂದೇ ನಂಬರ್‌ನ ಎರಡು ಬಸ್‍ಗಳನ್ನು ವಶಕ್ಕೆ ಪಡೆದ RTO
ಕೋಲಾರ: ನಗರದಲ್ಲಿ ಆರ್.ಟಿ.ಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಂದೇ ನಂಬರ್‌ನ ಎರಡು ಬಸ್‍ಗಳನ್ನು ವಶಕ್ಕೆ ಪಡೆದಿದ್ದಾರೆ.
ತೆರಿಗೆ ವಂಚಿಸಲು ಬಸ್ ಮಾಲೀಕರು ಒಂದೇ ನಂಬರ್‌ನ ಎರಡು ಬಸ್‍ಗೆ ಬಳಸಿದ್ದಾರೆ. ಈ ವಿಚಾರ ಕೆಜಿಎಫ್ ಆರ್.ಟಿ.ಓ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ದಾಳಿ ನಡೆಸಿದ್ದಾರೆ. ಎರಡು ಬಸ್‍ಗಳು ತಮಿಳುನಾಡಿನ ಖಾಸಗಿ ಟೂರ್ಸ್ ಅಂಡ್ ಟ್ರಾವೆಲ್ಸ್ ಕಂಪನಿಗೆ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




