February 4, 2026

ಸುರತ್ಕಲ್‌:ರಸ್ತೆ ಬದಿ‌ ನಿಂತಿದ್ದವರ ಮೇಲೆ ಹಲ್ಲೆ‌ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
 

0
IMG-20230821-WA0069


ಸುರತ್ಕಲ್‌ : ರಸ್ತೆ ಬದಿ‌ ನಿಂತಿದ್ದವರ ಮೇಲೆ ಹಲ್ಲೆ‌ ನಡೆಸಿದ್ದ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

ಇಡ್ಯ ಗ್ರಾಮದ ಕೊರಗಜ್ಜ ಕಾನ ಕಟ್ಲ ಆಶ್ರಯ ಕಾಲನಿ ಕೊರಗಜ್ಜ ದೈವಸ್ಥಾನ ಬಳಿಯ ನಿವಾಸಿ ಚೆನ್ನಪ್ಪ ಮುತ್ತು (18) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಶಾಂತ್ ಭಂಡಾರಿ ಹಾಗೂ ಬಸವರಾಜ್ ಎಂಬವರನ್ನು ಜು.17ರಂದು ಬಂಧಿಸಲಾಗಿತ್ತು. ಅವರು ನ್ಯಾಯಾಂಗ ಬಂಧನಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರೋಜರ್ ಡಿ ಕೋಸ್ಟಾ ಎಂಬವರು ಪರಿಚಯದ ಶಾಹಿಲ್ ಎಂಬವರೊಂದಿಗೆ ಮಳೆ ಬಂದ ಕಾರಣ ಜನತಾ ಕಾಲನಿಗೆ ಹೋಗುವ ರಸ್ತೆ ಬದಿಯಲ್ಲಿರುವ ಪಾಳು ಬಿದ್ದ ಮನೆಯ ಬಳಿ ನಿಂತುಕೊಂಡಿದ್ದ ಸಮಯ ಆರೋಪಿಗಳಾದ ಪ್ರಶಾಂತ್ ಭಂಡಾರಿ, ಬಸವರಾಜ್ ಮತ್ತು ಚೆನ್ನಪ್ಪ ಸೇರಿದಂತೆ ಇತರರು ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪೈಕಿ ಪ್ರಶಾಂತ್ ಭಂಡಾರಿ ಮತ್ತು ಬಸವರಾಜ್ ನನ್ನು ಬಂಧಿಸಿದ್ದ ಪೊಲೀಸರು ರವಿವಾರ ಚಿನ್ನಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ  ಚೆನ್ನಪ್ಪ ವಿರುದ್ಧ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲನಿಯ ಮಸೀದಿಗೆ ಕಲ್ಲೆಸೆದಿರುವ ಪ್ರಕರಣ, ಕದ್ರಿ ಪೊಲೀಸ್‌ ರಾಣಾ ವ್ಯಾಪ್ತಿಯಲ್ಲಿ ಬಸ್‌ ಒಳಗೆ ಬಂದು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!