March 13, 2026

ಬೆಳ್ತಂಗಡಿ: ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು: ಬೆಳ್ತಂಗಡಿಯ ಬಜಿರೆ ಗ್ರಾಮದಲ್ಲಿ ಘಟನೆ

0
IMG-20230711-WA0036.jpg

ಬೆಳ್ತಂಗಡಿ: ಅನಾದಿ ಕಾಲದಿಂದ ಆಚರಿಸಿಕೊಂಡು ಬರುತ್ತಿದ್ದ ಕೊರಗಜ್ಜನ ಗುಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಬಾಡಾರು ಕೊರಂಗಲ್ಲುವಿನಲ್ಲಿ ನಡೆದಿದೆ.

ಬೆಳ್ತಂಗಡಿ-ಬಂಟ್ವಾಳ ತಾಲೂಕು ಗಡಿ ಭಾಗದಲ್ಲಿರುವ ಇಲ್ಲಿಯ ಬಾಡಾರು ಎಂಬಲ್ಲಿ ಜನವರಿ ತಿಂಗಳಿನಲ್ಲಿ ವರ್ಷಂಪ್ರತಿ ದೊಂಪದಬಲಿ ಉತ್ಸವ ಜರಗಿದ ಮರುದಿನ ಈ ಕೊರಗಜ್ಜನ ಗುಡಿಯಲ್ಲಿ ಸಾರ್ವಜನಿಕ ನೇಮೋತ್ಸವ ನಡೆಯುತ್ತ ಬರುತ್ತಿತ್ತು.

ಇನ್ನು ಗುಡಿಯ ಜಾಗದ ವಿಚಾರ ಮತ್ತು ಆಡಳಿತದ ವಿಚಾರದಲ್ಲಿ ತಗಾದೆಗಳು ನಡೆಯುತ್ತಿತ್ತು ಎನ್ನಲಾಗಿದೆ.

ಇದೀಗ ಕೊರಗಜ್ಜನ ಗುಡಿಗೆಬೆಂಕಿ ಇಟ್ಟಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಹೆಚ್ಚಿನ ಮಾಹಿತಿಗಾಗಿ ನೀರಿಕ್ಷಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!