March 13, 2026

ಉಡುಪಿ: ವಸತಿ ಸಮುಚ್ಚಯದ ಫ್ಲ್ಯಾಟ್‌ ನ ಕಿಟಕಿಯಲ್ಲಿ ಸಿಲುಕಿದ್ದ ವಿಶೇಷ ಚೇತನ ಬಾಲಕನ ರಕ್ಷಣೆ

0
20230710_201940.jpg


 
ಉಡುಪಿ: ವಸತಿ ಸಮುಚ್ಚಯವೊಂದರ ಪ್ಲ್ಯಾಟ್ ನ ಕಿಟಕಿ ಪೊರಂನಲ್ಲಿ ವಿಶೇಷಚೇತನ ಬಾಲಕನೋರ್ವ ಸಿಲುಕಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ಇಂದು ನಡೆದಿದೆ.

ವಿಶೇಷಚೇತನನಾಗಿರುವ ಎಂಟು ವರ್ಷದ ಬಾಲಕ ಆರುಷ್ ಅಪಾರ್ಟ್ಮೆಂಟ್‌ನ 10ನೇ ಪ್ಲೋರ್‌ನ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ . ಈತ ಹನ್ನೊಂದನೇ ಮಹಡಿ ಬಾಲ್ಕನಿ ಮೂಲಕ ಹೊರ ಹೋಗಿ ಹತ್ತನೇ ಪ್ಲೋರ್‌ನ ಕಿಟಕಿ ಪೋರಂ‌ನಲ್ಲಿ ಸಿಕ್ಕಿಕೊಂಡು ಅಪಾಯದಲ್ಲಿ ಸಿಲುಕಿದ್ದ. ಮಾಹಿತಿ ದೊರೆತ ತಕ್ಷಣ ಸಕಾಲಕ್ಕೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆತಂಕಕ್ಕೆ ಒಳಗಾದ ಆರುಷ್ ಪೋಷಕರು ಯಶಸ್ವಿ ಕಾರ್ಯಚರಣೆಯಿಂದ ನಿಟ್ಟುಸಿರುಬಿಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!