December 15, 2025

ಕ್ರೂಸರ್-ಸಿಮೆಂಟ್ ಟ್ಯಾಂಕರ್ ನಡುವೆ ಭೀಕರ ರಸ್ತೆ ಅಪಘಾತ: ಮಗು ಸೇರಿ 6 ಮಂದಿ ಮೃತ್ಯು

0
IMG-20230630-WA0027.jpg

ಕಲಬುರಗಿ: ಕ್ರೂಸರ್ ಮತ್ತು ಸಿಮೆಂಟ್ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ 6 ಜನ ಸಾವನ್ನಪ್ಪಿ,ಹತ್ತು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಶಿರವಾಳ ವಾಡಿ ಹೊರ ವಲಯದಲ್ಲಿ ನಡೆದಿದೆ.

ರಸ್ತೆ ಅಪಘಾತದಲ್ಲಿ ಮೃತ ಪಟ್ಟವರೆಲ್ಲರೂ ಆಳಂದ ತಾಲೂಕಿನ ಅಣೂರು ಗ್ರಾಮದವರು ಎನ್ನಲಾಗಿದೆ.

ಇನ್ನು ಕ್ರೂಸರ್ ವಾಹನದಲ್ಲಿ ಅಫಜಲಪುರ ತಾಲೂಕಿನ ಘತ್ತರಗಿ ದರ್ಶನ ಮುಗಿಸಿಕೊಂಡು, ಅಕ್ಕಲಕೋಟೆಯ ಸ್ವಾಮಿ ಸಮರ್ಥ ದರ್ಶನ ಮುಗಿಸಿಕೊಂಡು ವಾಪಸ್ಸು ಬರುವಾಗ ಈ ದರುಂತ ನಡೆದಿದೆ.

ಕ್ರೂಸರ್ ವಾಹನದಲ್ಲಿ ಎರಡು ಕುಟುಂಬಗಳ ಸದಸ್ಯರು ಇದ್ದರು ಎನ್ನಲಾಗಿದ್ದು, ಮೃತರಲ್ಲಿ 5 ಜನ ಮಹಿಳೆಯರು ಹಾಗೂ ಒಂದು ಮಗು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!