ವಿಟ್ಲ | ಬೈಕ್ ಗಳ ನಡುವೆ ಅಪಘಾತ: ಓರ್ವ ಸವಾರನಿಗೆ ಗಂಭೀರ ಗಾಯ
ವಿಟ್ಲ: ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಒಂದು ಬೈಕಿನ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಮೇಗಿನಪೇಟೆಯಲ್ಲಿ ನಡೆದಿದೆ.
ಚಂದಳಿಕೆ ನಿವಾಸಿ ಪ್ರಶಾಂತ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದು ಬೈಕ್ ನಲ್ಲಿದ್ದ ಸವಾರ ಪುತ್ತೂರು ಬೈಪಾಸ್ ನಿವಾಸಿ, ವಿಟ್ಲದ ಐಟಿಐ ವಿದ್ಯಾರ್ಥಿ ಹೇಮಂತ್ ಮತ್ತು ಸಹ ಸವಾರ ಇನ್ನೋರ್ವ ವಿದ್ಯಾರ್ಥಿ ಸುಳ್ಯಪದವು ನಿವಾಸಿ ಪುನೀತ್ ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಚಂದಳಿಕೆ ಕಡೆಯಿಂದ ವಿಟ್ಲ ಕಡೆಗೆ ಪ್ರಶಾಂತ್ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಮತ್ತು ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ವಿಟ್ಲದ ಐಟಿಐ ವಿದ್ಯಾರ್ಥಿ ಪುನೀತ್ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಗಳ ನಡುವೆ ಈ ಅಪಘಾತ ಸಂಭವಿಸಿದೆ.





