ವಿಟ್ಲ: ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ: 15 ದಿನಗಳ ಹಿಂದೆ ಹೆರಿಗೆ ಮಾಡಿದ್ದ ಮಹಿಳೆ
ವಿಟ್ಲ : 15 ದಿನಗಳ ಹಿಂದಷ್ಟೇ ಹೆರಿಗೆಯಾದ ಬಾಣಂತಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಜೋಗಿಮಠ ಎಂಬಲ್ಲಿ ನಡೆದಿದೆ.
ಅನಿಶಾ (34) ಮೃತ ಮಹಿಳೆ.
ಅನಿಶಾ ರವರಿಗೆ 15 ದಿನಗಳ ಹಿಂದಷ್ಟೆ ಮೂರನೇ ಹೆರಿಗೆಯಾಗಿದ್ದು, ಹೆರಿಗೆಯ ನಂತರದ ದಿನದಿಂದ ಯಾವುದೋ ಕಾರಣದಿಂದ ಮನಸ್ಸಿನಲ್ಲಿ ನೊಂದುಕೊಂಡಿದ್ದರು., ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಮಧ್ಯಾಹ್ನ ವೇಳೆ ಜೋಗಿಮಠ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಮರಣದಲ್ಲಿ ಬೇರೆ ಯಾವುದೇ ರೀತಿಯ ಸಂಶಯವಿಲ್ಲ ಎಂದು ಆಕೆಯ ಸಹೋದರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.






