December 16, 2025

ಕಡಬ: ಚಿನ್ನದಂಗಡಿಯ ಉದ್ಘಾಟನೆಯ ಸಿದ್ದತೆಯಲ್ಲಿದ್ದ ಯುವಕನ ಸಾವು ಪ್ರಕರಣ: ಊಹಾಪೋಹಗಳಿಗೆ ತೆರೆ ಎಳೆದ ಪೋಸ್ಟ್ ಮಾರ್ಟಂ ರಿಪೋರ್ಟ್

0
IMG-20230622-WA0010.jpg

ಕಡಬ: ಚಿನ್ನದ ಅಂಗಡಿಯ ಉದ್ಘಾಟನೆಯಂದೇ ಗುಂಡ್ಯ ಸಮೀಪದ ಕೆಂಪು ಹೊಳೆಯಲ್ಲಿ ಅಪಘಾತದಲ್ಲಿ ಮೃತಪಟ್ಟ ನಾಗಪ್ರಸಾದ್ ಅವರ ಪೋಸ್ಟ್ ಮಾರ್ಟಂ ವರದಿ ಬಂದಿದ್ದು, ಸಹಜ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದಾಗಿ ತಿಳಿದು ಬಂದಿದೆ.

ಕಡಬ ನಿವಾಸಿಯಾಗಿರುವ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್ ಅವರು ಐಶ್ವರ್ಯ ಗೋಲ್ಡ್ ಉದ್ಘಾಟನೆಗೂ ಮುನ್ನ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.

ಇನ್ನು ಕಡಬ ತಾಲೂಕಿನ ಮರ್ದಾಳದ ಮಸೀದಿ ಬಿಲ್ಡಿಂಗ್ ನಲ್ಲಿ ನಾಗಪ್ರಸಾದ್ ಮಾಲೀಕತ್ವದ ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದ ಅಂಗಡಿ ಜೂ.22ರಂದು ಉದ್ಘಾಟನೆಯಾಗಬೇಕಿತ್ತು. ಆದರೆ ಮುಂಜಾನೆ ನಾಗಪ್ರಸಾದ್ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಕೆಂಪುಹೊಳೆ ಸಮೀಪ ಶವವಾಗಿ ಪತ್ತೆಯಾಗಿದ್ದರು.

ಘಟನೆ ಬಗ್ಗೆ ಸಾರ್ವಜನಿಕವಾಗಿ ಹಲವು ಅನುಮಾನಗಳಿದ್ದ ಕಾರಣ ಪೊಲೀಸರು ಕೂಡ ಪೋಸ್ಟ್ ಮಾರ್ಟಮ್ ವರದಿಗಾಗಿ ಕಾಯುತ್ತಿದ್ದರು. ಪೋಸ್ಟ್ ಮಾರ್ಟಮ್ ವರದಿ ಬಂದಿದ್ದು ನಾಗಪ್ರಸಾದ್ ಅಪಘಾತದಿಂದಲೇ ಮರಣಪಟ್ಟಿದ್ದಾರೆ ಎಂದು ದೃಢಪಟ್ಟಿದ್ದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಪಘಾತ ಸ್ಥಳದಲ್ಲಿ ಅನುಮಾನ ಮೂಡಿಸಿದ್ದ ಎರಡು ಹೆಲ್ಮೆಟ್ ಮನೆಯಿಂದಲೇ ತಂದಿರುವ ಬಗ್ಗೆ ತನಿಖೆ ವೇಳೆ ಪೊಲೀಸರ ಗಮನಕ್ಕೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!