“ನಿನ್ನ ಅಂತ್ಯ ನಿಶ್ಚಿತ” ಸಾಹಿತಿ ಬಂಜಗೆರೆ ಜಯಪ್ರಕಾಶ್‍ಗೆ ಜೀವ ಬೆದರಿಕೆ ಪತ್ರ
ರಾಮನಗರ: ಪಠ್ಯ ಪರಿಷ್ಕರಣೆ ಕುರಿತು ಮಾತನಾಡಿದ್ದ ಸಾಹಿತಿ ಹಾಗೂ ಚಿಂತಕ ಬಂಜಗೆರೆ ಜಯಪ್ರಕಾಶ್ ಗೆ ಜೀವ ಬೆದರಿಕೆ ಪತ್ರ ಬಂದಿದೆ.
ಪೋಸ್ಟ್ ಮೂಲಕ ಅನಾಮಧೇಯ ಪತ್ರವೊಂದರಲ್ಲಿ “ಬಂಜೆಗೆರೆ ಜಯಪ್ರಕಾಶ್ ಅಂತ್ಯ ನಿಶ್ಚಿತ” ಎಂದು ಬೆದರಿಕೆ ಹಾಕಲಾಗಿದೆ.
ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಧ್ವನಿ ಎತ್ತಿದ್ದ ಬಂಜಗೆರೆ ಜಯಪ್ರಕಾಶ್‍ಗೆ ಕಳೆದ ಜುಲೈನಿಂದ ನಿರಂತರ ಬೆದರಿಕೆ ಪತ್ರಗಳು ಬಂದಿವೆ.
ಬೆದರಿಕೆ ಪತ್ರ ಸಂಬಂಧ ಸಾಹಿತಿ ಬಂಜಗೆರೆ ಜಯಪ್ರಕಾಶ್ ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.




