ವೊಡಾಫೋನ್-ಐಡಿಯಾ ಪ್ರೀಪೇಯ್ಡ್ ಪ್ಲಾನ್ ಗಳ ದರ ಶೇ.20ರಿಂದ 25ರಷ್ಟು ಏರಿಕೆ
ನವದೆಹಲಿ: ಏರ್ಟೆಲ್ ಬೆನ್ನಲ್ಲೇ ಪ್ರೀಪೇಯ್ಡ್ ಗ್ರಾಹಕರಿಗೆ ವೊಡಾಫೋನ್ ಐಡಿಯಾ ಕೂಡ ಶಾಕ್ ನೀಡಿದ್ದು, ಶೇ.20 ರಿಂದ 25ರಷ್ಟು ದರ ಏರಿಕೆ ಮಾಡಿದೆ.
ನಿನ್ನೆಯಷ್ಟೇ ದೇಶದ ಅತೀ ದೊಡ್ಡ ಮೊಬೈಲ್ ಸೇವಾ ಸಂಸ್ಥೆ ಭಾರ್ತಿ ಏರ್ಟೆಲ್ ತನ್ನ ಪ್ರೀಪೇಯ್ಡ್ ಪ್ಲಾನ್ ಗಳ ದರಗಳಲ್ಲಿ ಶೇ.20 ರಿಂದ 25ರಷ್ಟು ದರ ಏರಿಕೆ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಸಾಲದ ಸುಳಿಯಲ್ಲಿರುವ ವೊಡಾಫೋನ್ ಐಡಿಯಾ ಸಂಸ್ಥೆ ಕೂಡ ತನ್ನ ದರಗಳನ್ನು ಶೇ.ಶೇ.20 ರಿಂದ 25ರಷ್ಟು ದರ ಏರಿಕೆ ಮಾಡಿದೆ.





