ಕಾಂಗ್ರೆಸ್ ಪರ ಬಹಿರಂಗ ಪ್ರಚಾರ ಮಾಡಿದ JDS ಎಂ.ಎಲ್.ಸಿ ಎಸ್.ಎಲ್. ಭೋಜೇಗೌಡ: ವಿಡಿಯೋ ವೈರಲ್
ಚಿಕ್ಕಮಗಳೂರು: ಕಾಂಗ್ರೆಸ್ ಪರ ಎಚ್.ಡಿ. ಕುಮಾರಸ್ವಾಮಿ ಪರಮಾಪ್ತ ಜೆಡಿಎಸ್ ಎಂ.ಎಲ್.ಸಿ ಆಗಿರುವ ಎಸ್.ಎಲ್. ಭೋಜೇಗೌಡ ಅವರು ಬಹಿರಂಗ ಪ್ರಚಾರ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಜೆಡಿಎಸ್ ಎಂ.ಎಲ್.ಸಿ. ಎಸ್.ಎಲ್. ಭೋಜೇಗೌಡ ಕಾಂಗ್ರೆಸ್ ಪರ ಬಹಿರಂಗ ಪ್ರಚಾರದಲ್ಲಿ ಭಾಗಿಯಾಗಿದ್ದು, ಸಿಟಿ ರವಿ ವಿರುದ್ದ ಹರಿಹಾಯ್ದಿದ್ದಾರೆ.
ಗ್ರಾಮದ ದೇವರಕಟ್ಟೆ ಮುಂದೆ ಕೂತು ಮತ ಪ್ರಚಾರ ಮಾಡಿರುವ ಅವರು, “ಶಾಸಕ ಸಿ.ಟಿ. ರವಿ ಸೋಲಿಸಲು ನೀವೆಲ್ಲ ಕಾಂಗ್ರೆಸ್ ಗೆ ಮತ ಹಾಕಿ. ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ದೇವೇಗೌಡರನ್ನು ಮುಂದಿನ ಜನ್ಮದಲ್ಲಿ ಸಾಬರಾಗಿ ಹುಟ್ಟಿ ಅಂತಾರೆ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುತ್ತಾ ಇಷ್ಟುದ್ದ ಬೆಳೆದವನನ್ನ ನೀವು ಕಟ್ ಮಾಡಬೇಕು ಎಂದು ನೆರೆದಿದ್ದ ಕೈ ಕಾರ್ಯಕರ್ತರಿಗೆ ಹೇಳಿದರು.