August 21, 2026

ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಸ್ನೇಹಿತರ ನೆರವಿನಿಂದ ಕೊಲೆಗೈದ ಪುತ್ರಿ

0
image_editor_output_image2066580007-1637645673310.jpg

ಬೆಂಗಳೂರು: ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಸ್ನೇಹಿತರ ನೆರವಿನಿಂದ ಪುತ್ರಿಯೇ ಕೊಲೆಗೈದಿರುವ ಘಟನೆ ಭಾನುವಾರ ತಡರಾತ್ರಿ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೀಪಕ್ ಕುಮಾರ್ ಸಿಂಗ್ (48) ಅತ್ತೂರು ಲೇಔಟ್ ನಿವಾಸಿ ದೀಪಕ್ ಕುಮಾರ್ ಸಿಂಗ್ (48) ಕೊಲೆಯಾದಾತ. ಸಿಂಗ್ ತನ್ನ ಮಗಳಿಗೆ ಪ್ರತಿದಿನ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಹತಾಶಳಾದ ಆತನ ಮಗಳು ಪಿಯು ವಿದ್ಯಾರ್ಥಿಗಳಾದ ತನ್ನ ಸ್ನೇಹಿತರ ಸಹಾಯದಿಂದ ತಂದೆಯನ್ನು ಕೊಂದಿದ್ದಾಳೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಪಟ್ಟಂತೆ ನಾಲ್ವರು ಪಿಯುಸಿ ವಿದ್ಯಾರ್ಥಿಗಳನ್ನು ಯಲಹಂಕ ನ್ಯೂ ಟೌನ್ ಪೊಲೀಶರು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!