March 23, 2026

ಬಂಟ್ವಾಳ: ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ಮಹಿಳೆ ನೀರಿಗೆ ಬಿದ್ದು ಮೃತ್ಯು

0
IMG-20230413-WA0057.jpg

ಬಂಟ್ವಾಳ: ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ಮಹಿಳೆಯೋರ್ವಳು ನೇತ್ರಾವತಿ ನದಿಯಲ್ಲಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಎ.19 ರಂದು ಬುಧವಾರ ಸಂಜೆ ವೇಳೆ ನಡೆದಿದೆ.

ಬರಿಮಾರು ಗ್ರಾಮದ ಬುರ್ದು ನಿವಾಸಿ ರಾಮಕ್ಕು ಮೃತಪಟ್ಟ ಮಹಿಳೆ.

ಬಡ ಕುಟುಂಬದ ಮಹಿಳೆ ಇವರಾಗಿದ್ದು, ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದರು. ನೇತ್ರಾವತಿ ನದಿಯ ಬದಿಯಲ್ಲಿ ಇವರ ಮನೆಯಿದ್ದು, ಬಟ್ಟೆ ತೊಳೆಯುವ ಉದ್ದೇಶದಿಂದ ನದಿ ಇಳಿದವರು ಆಯತಪ್ಪಿ ಆಳವಾದ ಜಾಗದಲ್ಲಿ ನೀರಿಗೆ

ಜಾರಿ ಬಿದ್ದು ಮೃತಪಟ್ಟಿರಬೇಕು ಎಂದು ಸಂಶಯಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಶಿಪ್ಟ್ ಮಾಡುವ ವ್ಯವಸ್ಥೆ ಮಾಡಿದ್ದಾರೆ.”

Leave a Reply

Your email address will not be published. Required fields are marked *

error: Content is protected !!