June 30, 2026

ಮಂಗಳೂರು: ಫೈಬರ್‌ಶೀಟ್‌ ಬದಲಿಸುವ ವೇಳೆ ಬಿದ್ದು ಕಾರ್ಮಿಕ ಮೃತ್ಯು

0
dead-4-1.jpg

ಮಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ದೇರೆಬೈಲ್‌ ಕೊಂಚಾಡಿಯಲ್ಲಿ ಸಂಭವಿಸಿದೆ.

ಮೃತರನ್ನು ಜಿತೇಂದ್ರ (44) ಎಂದು ಗುರುತಿಸಲಾಗಿದೆ. ಅವರು ನೀರುಮಾರ್ಗದ ಗುತ್ತಿಗೆದಾರ ಅವೀನ್‌ ಅಮೀನ್‌ ಅವರೊಂದಿಗೆ ಹಳೆಯ ಫೈಬರ್‌ಶೀಟ್‌ ಬದಲಿ ಮಾಡುವ, ಕಬ್ಬಿಣದ ಶೀಟ್‌ಗಳಿಗೆ ಸ್ಕ್ರೂ ಅಳವಡಿಸುವ ಕೆಲಸ ಮಾಡುತ್ತಿದ್ದರು.

ಶನಿವಾರ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ ಕೆಳಗೆ ಬಿದ್ದಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಸರಕಾರಿ ವೆನ್ಲಾಕ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಜಿತೇಂದ್ರ ಮೃತಪಟ್ಟಿದ್ದರು. ಘಟನೆಗೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿರುವುದೇ ಕಾರಣ ಎಂದು ಕಾವೂರು ಪೊಲೀಸರಿಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!