February 2, 2026

ಬಂಟ್ವಾಳ: ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆ: 2 ದಿನಕ್ಕೊಮ್ಮೆ ನೀರು ರೇಷನಿಂಗ್‌ ಅನಿವಾರ್ಯ

0
image_editor_output_image371643400-1681774336012.jpg

ಬಂಟ್ವಾಳ: ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ಕಾರಣ ನಗರದ ಭವಿಷ್ಯದ ದೃಷ್ಟಿಯಿಂದ ನೀರು ರೇಷನಿಂಗ್‌ ಮಾಡುವುದು ಅನಿವಾರ್ಯ ಎಂಬ ಪರಿಸ್ಥಿತಿಯನ್ನು ಮಂಗಳೂರು ಪಾಲಿಕೆ ಮನಗಂಡಿದೆ.

ಹೀಗಾಗಿ ಕೆಲವೇ ದಿನದಲ್ಲಿ ರೇಷನಿಂಗ್‌ ನಿಯಮ ಜಾರಿಗೆ ಬರುವ ಎಲ್ಲ ಸಾಧ್ಯತೆಗಳಿವೆ. ಮೊದಲಿಗೆ 2 ದಿನಕ್ಕೊಮ್ಮೆ ನೀರು ನಿಯಮ ಜಾರಿಗೆ ತರಲು ಪಾಲಿಕೆ ಯೋಚನೆ ಮಾಡಿದೆ.

ಎ. 5ರಂದು ಬಂಟ್ವಾಳದ ಶಂಭೂರಿನ ಎಎಂಆರ್‌ ಅಣೆಕಟ್ಟಿನಿಂದ ತುಂಬೆ ಅಣೆಕಟ್ಟಿಗೆ ನೀರು ಬಿಡಲಾಗಿತ್ತು. 6 ಮೀ.ವರೆಗೆ ನೀರು ನಿಲ್ಲಿಸಲಾಗಿತ್ತು.

ತುಂಬೆ ಡ್ಯಾಂನಲ್ಲಿ 5.57 ಮೀ. ನೀರು ಸಂಗ್ರಹವಿದೆ. ಎಎಂಆರ್‌ ಡ್ಯಾಂನಲ್ಲಿ 14.17 ಮೀ. ನೀರು ಸಂಗ್ರಹವಿದೆ.

Leave a Reply

Your email address will not be published. Required fields are marked *

error: Content is protected !!