September 20, 2024

ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆಗೈದ ಪತಿ

0

ಚಿಕ್ಕಬಳ್ಳಾಪುರ: ಮದುವೆಯಾಗಿ 8 ತಿಂಗಳು ಕಳೆಯೋದ್ರೊಳಗೆ ಪತಿ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಶ್ರೀನಗರದಲ್ಲಿ ನಡೆದಿದೆ.

ಮೃತಳನ್ನು ಜೆನಿಲಾ ಜೋಬಿಯಾ ಎಂದು ಗುರುತಿಸಲಾಗಿದ್ದು, ಈಕೆಯನ್ನು ಪತಿ ಸ್ಯಾಮ್ ಕೊಲೆ ಮಾಡಿದ್ದಾನೆ. ಸ್ಯಾಮ್ ದೊಡ್ಡಬಳ್ಳಾಪುರದ ನಿವಾಸಿಯಾಗಿದ್ದು, ಜನಿಲಾ ಜೋಬಿಯಾ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಮೂಲದವಳು.

ಇವರಿಬ್ಬರಿಗೂ ಕಳೆದ 8 ತಿಂಗಳ ಹಿಂದೆಯಷ್ಟೇ ಮನೆ ಮಂದಿಯೆಲ್ಲಾ ಸೇರಿ ಸಂಭ್ರಮದಿಂದ ಮದುವೆ ಮಾಡಿದರು. ಆದರೆ ಮದುವೆಯಾಗಿ ಕೇವಲ 8 ತಿಂಗಳು ಆಗುವುದರೊಳಗೆ ತಾಳಿ ಕಟ್ಟಿದ ಗಂಡನ ಕೈಯಿಂದಲೇ ಹೆಂಡತಿ ಸಾವನ್ನಪ್ಪಿದ್ದಾಳೆ.

ಸ್ಯಾಮ್ ಹಾಗೂ ಜೋಬಿಯಾ ನಡುವೆ ಮಧ್ಯರಾತ್ರಿ ರೂಂನಲ್ಲಿ ಜೋರು ಜಗಳವಾಗಿದ್ದು, ಜಗಳದ ವೇಳೆ ಸ್ಯಾಮ್ ಚಾಕುವಿನಿಂದ ಜೋಬಿಯಾಳಿಗೆ ಮನಸ್ಸೋ ಇಚ್ಚೆ ಇರಿದಿದ್ದಾನೆ. ಈ ವೇಳೆ ಮನೆಯಲ್ಲೇ ಇದ್ದ ಸ್ಯಾಮ್ ಅಪ್ಪ-ಅಮ್ಮ ಹಾಗೂ ಅಕ್ಕಪಕ್ಕದ ಮನೆಯವರು ಏನಾಗ್ತಿದೆ ಯಾಕೆ ಗಲಾಟೆ ಅಂತ ರೂಂ ಬಾಗಿಲು ಬಡಿದು ಒಳಗೆ ಹೋದಾಗ ಸ್ಯಾಮ್ ಮಾಡಿರೋ ಕೃತ್ಯ ಬೆಳಕಿಗೆ ಬಂದಿದೆ

Leave a Reply

Your email address will not be published. Required fields are marked *

error: Content is protected !!