ಬಟ್ಟೆಯನ್ನು ಒಣಗಲು ಹಾಕಲು ಹೋದಾಗ ವಿದ್ಯುತ್ ಸ್ಪರ್ಶ: ಮಹಿಳೆ ಸ್ಥಳದಲ್ಲಿಯೇ ಮೃತ್ಯು
ಕೊರಟಗೆರೆ: ಬಟ್ಟೆ ಒಗೆದು ಒದ್ದೆ ಬಟ್ಟೆಯನ್ನು ಒಣಗಲು ಹಾಕಲು ಹೋದ ಮಹಿಳೆಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಸಜ್ಜನರ ಬೀದಿಯಲ್ಲಿ ಈ ದುರ್ಘಟನೆ ನಡೆದಿದ್ದು ಭಾಗ್ಯಮ್ಮ ಲೇಟ್ ನಾಗರಾಜಯ್ಯ (45 ವರ್ಷ) ಎಂಬ ಮಹಿಳೆ ಸಾವಿಗೀಡಾದ ದುರ್ದೈವಿಯಾಗಿದ್ದಾಳೆ.
ಮೃತೆ ಭಾಗ್ಯಮ್ಮ ಮೂಲತಹ ಕೊರಟಗೆರೆ ತಾಲೂಕು ಮಾರುತಿನಗರ ಬುಕ್ಕಾಪಟ್ಟಣ ಬಳಿಯ ನಗರದ ವಾಸಿಯಾಗಿದ್ದು ಈಕೆ ಸುಮಾರು ವರ್ಷಗಳಿಂದ ಕೊರಟಗೆರೆಯ ಸಜ್ಜನರ ಬೀದಿಯ ಬಾಡಿಗೆ ಮನೆಯಲ್ಲಿ ವಾಸವಿದ್ದು ಸೋಮವಾರ ಮಧ್ಯಾಹ್ನ ಬಟ್ಟೆ ಒಗೆದು ಒದ್ದೆ ಬಟ್ಟೆಯನ್ನು ಒಣಗಿಸಲು ಹಾಕುವ ಸಂದರ್ಭದಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ತಂತಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ ಎನ್ನಲಾಗಿದೆ.





