April 11, 2025

2002ರ ಗುಜರಾತ್‌ ಹತ್ಯಾಕಾಂಡ, ಅಲ್ಪಸಂಖ್ಯಾತರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ: 26 ಆರೋಪಿಗಳ ಖುಲಾಸೆಗೊಳಿಸಿದ ಕೋರ್ಟ್

0

ಗೋಧ್ರಾ: 2002ರ ಗುಜರಾತ್‌ ಹತ್ಯಾಕಾಂಡ, ವೇಳೆ ಕಲೋಲ್‌ ಎಂಬಲ್ಲಿ ನಡೆದಿದ್ದ ಅಲ್ಪಸಂಖ್ಯಾತರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ 26 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಗುಜರಾತ್‌ನ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ.

ಪಂಚಮಹಲ್ ಜಿಲ್ಲೆಯ ಕಲೋಲ್‌ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಲೀಲಾಭಾಯಿ ಚುಡಾಸಮಾ ಅವರು ಆರೋಪಿಗಳನ್ನು ಖುಲಾಸೆ ಮಾಡಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದ 39 ಆರೋಪಿಗಳ ಪೈಕಿ 13 ಮಂದಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಮೃತಪಟ್ಟಿದ್ದರು. ಅವರ ವಿರುದ್ಧದ ವಿಚಾರಣೆಯನ್ನು ಈ ಹಿಂದೆಯೇ ರದ್ದುಗೊಳಿಸಲಾಗಿತ್ತು.

2002ರ ಫೆಬ್ರುವರಿ 27 ರಂದು ಗೋಧ್ರಾದಲ್ಲಿ ಸಾಬರಮತಿ ರೈಲನ್ನು ಸುಟ್ಟುಹಾಕಲಾಗಿತ್ತು. ಮಾರ್ಚ್ 1, ರಂದು ಕೋಮು ಗಲಭೆ ಭುಗಿಲೆದ್ದು, ಹಿಂಸಾಚಾರಗಳು ಸಂಭವಿಸಿದ್ದವು. ಸದ್ಯ ಖುಲಾಸೆಗೊಂಡಿರುವ ಈ 26 ಆರೋಪಿಗಳೂ ಗಲಭೆಯ ಭಾಗವಾಗಿದ್ದರು.

 

 

2002 ಮಾರ್ಚ್ 2 ರಂದು ಕಲೋಲ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಾಸಿಕ್ಯೂಷನ್ 190 ಸಾಕ್ಷಿಗಳು ಮತ್ತು 334 ಸಾಕ್ಷ್ಯಗಳನ್ನು ಪರಿಶೀಲಿಸಿತ್ತು. ಆದರೆ ನ್ಯಾಯಾಲಯವು ಸಾಕ್ಷಿಗಳಲ್ಲಿ ವಿರೋಧಾಭಾಸಗಳಿವೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಪ್ರಾಸಿಕ್ಯೂಷನ್‌ ವಾದವನ್ನು ಕೋರ್ಟ್‌ ತಳ್ಳಿಹಾಕಿದೆ.

Leave a Reply

Your email address will not be published. Required fields are marked *

error: Content is protected !!