ವಿವಾಹವಾಗಿ 2 ವರ್ಷವಾದರೂ ಮಕ್ಕಳಾಗದ ಬೇಸರ: ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ
ಶಿವಮೊಗ್ಗ: ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ಮಿಳಘಟ್ಟ ಬಡಾವಣೆಯಲ್ಲಿ ನಡೆದಿದೆ.
ಮೃತ ಗೃಹಿಣಿಯನ್ನು ಸಂಗೀತ (21) ಎಂದು ಗುರುತಿಸಲಾಗಿದೆ.
ಕಳೆದ ಎರಡು ವರ್ಷದ ಹಿಂದೆ ಮಿಳಘಟ್ಟದ ನಿವಾಸಿ ಗುರುಮೂರ್ತಿ ಜೊತೆ ಸಂಗೀತ ವಿವಾಹವಾಗಿತ್ತು.
ವಿವಾಹವಾಗಿ ಎರಡು ವರ್ಷವಾದರೂ ಮಕ್ಕಳಾಗಿರಲಿಲ್ಲ ಎಂದು ಕೊರಗುತ್ತಿದ್ದಳು ಎನ್ನಲಾಗಿದೆ.