September 8, 2024

60 ಲಕ್ಷ ರೂ. ಮೌಲ್ಯದ 6,798 ಇಸ್ತ್ರಿ ಪೆಟ್ಟಿಗೆಗಳ ಜಪ್ತಿ ಮಾಡಿದ ಚೆಕ್ ಪೋಸ್ಟ್ ಪೊಲೀಸರು

0

ಬಾಗಲಕೋಟೆ: ಲಕ್ಷಾಂತರ ಮೌಲ್ಯದ ಇಸ್ತ್ರಿ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನವನ್ನು ಬಾಗಲಕೋಟೆ ಎಸ್.ಪಿ ಜಯಪ್ರಕಾಶ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದೆ.

ನಗರದ ಹೊರವಲಯದ ಮಹಾರುದ್ರಪ್ಪನ ಹಳ್ಳದ ಬಳಿ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ನಾಯಕರಿಗೆ ಸೇರಿದ ಇಸ್ತ್ರಿ ಪೆಟ್ಟಿಗೆಗಳು ಇರಬಹುದೆಂಬ ಶಂಕೆ ಬಂದ ಹಿನ್ನೆಲೆ ಕ್ಯಾಂಟರ್ ವಾಹನ ಮೇಲೆ ಬಾಗಲಕೋಟೆ ನಗರದ ಪೊಲೀಸರು ದಾಳಿ ಮಾಡಿದ್ದು, 6798 ಇಸ್ತ್ರಿ ಪೆಟ್ಟಿಗೆಗಳನ್ನು ಜಪ್ತಿ ಮಾಡಿದ್ದಾರೆ.

6798 ಇಸ್ತ್ರಿ ಪೆಟ್ಟಿಗೆ ಜಪ್ತಿ: ಈ ವೇಳೆ ಕ್ಯಾಂಟರ್ ವಾಹನ ಪರಿಶೀಲಿಸಿದ ಪೊಲೀಸರು, ಅಂದಾಜು 60 ಲಕ್ಷ ಮೌಲ್ಯದ 6798 ಇಸ್ತ್ರಿ ಪೆಟ್ಟಿಗೆಗಳು ಇರುವುದು ಪತ್ತೆಯಾಗಿವೆ.

ವಾಹನದ ಚಾಲಕನ ಬಳಿ ಸಮರ್ಪಕ ಬಿಲ್ ಇಲ್ಲದಿರುವ ಮಾಹಿತಿ ಬಂದಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!