May 10, 2026

ವಿಟ್ಲ ನಗರ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಪ.ಪಂ ಮಾಜಿ ಅಧ್ಯಕ್ಷೆ ದಮಯಂತಿ ಆಯ್ಕೆ

0
IMG-20230331-WA0002.jpg

ವಿಟ್ಲ: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಾಗೂ ವಿಟ್ಲ ನಗರ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೊಲ್ಯ ಶ್ರೀನಿವಾಸ್ ಶೆಟ್ಟಿ ವಿಟ್ಲ ರವರ ಶಿಫಾರಸ್ಸಿನ ಮೇರೆಗೆ ಹಾಗೂ ಮಾಜಿ ಶಾಸಕಿ ಟಿ ಶಕುಂತಲಾ ಶೆಟ್ಟಿಯವರ ಆದೇಶ ಮೇರೆಗೆ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಮ್ ಕೆಬಿ ಯವರು ವಿಟ್ಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ದಮಯಂತಿ, ಉಪಾಧ್ಯಕ್ಷೆಯಾಗಿ ಶ್ರೀಮತಿ ತೆರೆಸಾ ಪೀಟರ್ ಮತ್ತು ಶ್ರೀಮತಿ ಲತಾವೇಣಿ ಅಶೋಕ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಅಸ್ಮಾ ಉಮರ್, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಕಮಲಾಕ್ಷಿ ಮತ್ತು ಶ್ರೀಮತಿ ಪದ್ಮಿನಿ ಹಾಗೂ 10 ಸದಸ್ಯರ ನೂತನ ಮಹಿಳಾ ಸಮಿತಿಗೆ ನೇಮಿಸಿ ಅದೇಶಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ಎಂ ಎಸ್ ಮುಹಮ್ಮದ್,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳಿದರ್ ರೈ ಮಠಂದ್ದಬೆಟ್ಟು, ಉಮನಾಥ್ ಶೆಟ್ಟಿ ಪೆರ್ನೆ,ಬ್ಲಾಕ್ ವಕ್ತಾರ ರಮಾನಾಥ್ ವಿಟ್ಲ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷರಾದ ಶುಭಾಸ್ ಚಂದ್ರ ಶೆಟ್ಟಿ ಕುಲಾಲ್, ವಿಟ್ಲ ನಗರ ಕಾಂಗ್ರೆಸ್ ವಕ್ತಾರರಾದ ವಿ ಕೆ ಎಂ ಅಶ್ರಫ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಕುಂತಲಾ ಕುಲಾಲ್, ಬ್ಲಾಕ್ ಉಪಾಧ್ಯಕ್ಷರಾದ ಪ್ರಭಾಕರ್ ಭಟ್ ಮಾವೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಬ್ಲಾಕ್ ಅಧ್ಯಕ್ಷರಾದ ವಿ ಅಬ್ದುಲ್ ರಹಿಮಾನ್(ಹಸೈನಾರ್ ನೆಲ್ಲಿಗುಡ್ಡೆ), ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಶೆಟ್ಟಿ ನಡುಮನೆ, ರಶೀದ್ ವಿ ಎ,ಪದ್ಮನಾಭ ಪೂಜಾರಿ ಅಳಿಕೆ, ವಿಟ್ಲ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿ ಕೆ ಎಂ ಹಂಝ, ವಿಟ್ಲ ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮೊಹಮ್ಮದ್ ಹನೀಫ್ ಹಾಗೂ ವಿವಿಧ ಮುಂಚೂಣಿ ಘಟಕದ ಅಧ್ಯಕ್ಷರುಗಳಾದ ಮೋಹನ್ ಗುರ್ಜಿನಡ್ಕ, ಅಬ್ದುಲ್ ಕರೀಂ ಕುದ್ದುಪದವು, ರಾಮಣ್ಣ ಪಿಲಿಂಜ, ಎಲ್ಯಣ್ಣ ಪೂಜಾರಿ ಹಾಗೂ ಪಕ್ಷದ ಪ್ರಮುಖರಾದ ಶೈಕ್ ಅಲಿ ಸೆರಾಜೆ, ಅಬ್ದುಲ್ ರಹಿಮಾನ್ ಕುರುಂಬಳ, ಸಮೀರ್ ಪಳಿಕೆ ಮತ್ತು 17 ಬೂತ್ ಅಧ್ಯಕ್ಷರುಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!