May 11, 2026

10 ಸಾವಿರ ರೂ. ಲಂಚ: ತಹಶೀಲ್ದಾರ್ ಕಚೇರಿಯ ಎಫ್‍ಡಿಎ ಲೋಕಾಯುಕ್ತ ಬಲೆಗೆ

0
image_editor_output_image376959939-1678771773308.jpg

ಹಾವೇರಿ: ಹತ್ತು ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಸವಣೂರು ವಿಭಾಗದ ತಹಶೀಲ್ದಾರ್ ಕಚೇರಿಯ ಎಫ್‍ಡಿಎ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.

ಎಫ್‍ಡಿಎ ತೇಜಸ್ವಿಕುಮಾರ, ಹುರಳಿಕುಪ್ಪಿ ಗ್ರಾಮದ ಗುಡ್ಡಪ್ಪ ದೊಡ್ಡಮನಿ ಎಂಬುವರಿಗೆ ಎಸಿ ಕೋರ್ಟಿನಲ್ಲಿ ಆರ್‌ಟಿಸಿ ಆದೇಶ ಪ್ರತಿ ನೀಡಲು ಹದಿನೈದು ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ ಹತ್ತು ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.

ತೇಜಸ್ವಿ ಕುಮಾರನನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!