March 21, 2026

ಪ್ರೀತಿಸ್ತಿದ್ದ ಯುವತಿಯನ್ನೇ 16 ಬಾರಿ ಚುಚ್ಚಿ ಕೊಲೆ ಮಾಡಿದ ಯುವಕ

0
image_editor_output_image1171369417-1677649073983.jpg

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೊಂದು ಬರ್ಬರ ಕೊಲೆಯಾಗಿದೆ. ವರ್ಷಗಳಿಂದ ಪ್ರೀತಿಸ್ತಿದ್ದ ಪ್ರಿಯತಮೆಯನ್ನೇ ಪಾಗಲ್ ಪ್ರೇಮಿಯೊಬ್ಬ 16 ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿರೋ ಘಟನೆ ಮುರಗೇಶ್ ಪಾಳ್ಯ ದ ಎನ್‍ಎಎಲ್ ರಸ್ತೆಯಲ್ಲಿ ನಡೆದಿದೆ.

ಮೃತಳನ್ನು ಲೀಲಾ ಪವಿತ್ರಾ (26) ಎಂದು ಗುರುತಿಸಲಾಗಿದ್ದು, ಈಕೆಯನ್ನು ಪಾಗಲ್ ಪ್ರೇಮಿ ದಿನಕರ್ ಬನ್ನಾಳ ಕೊಲೆ ಮಾಡಿದ್ದಾನೆ.

ಆಂಧ್ರಪ್ರದೇಶ ಮೂಲದ ಲೀಲಾ ಪವಿತ್ರಾ, ಒಮೆಗಾ ಎನ್ನುವ ಮೆಡಿಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಲೀಲಾ ಪವಿತ್ರಾ ಹಾಗೂ ದಿನಕರ್ ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ರು.

ಆದರೆ ಇತ್ತೀಚೆಗೆ ಲೀಲಾ, ದಿನಕರ್‌ನನ್ನು ಅವಾಯ್ಡ್ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಕೆಲಸ ಮುಗಿಸಿ ಲೀಲಾಳನ್ನು ಹತ್ಯೆಗೈದಿದ್ದಾನೆ

Leave a Reply

Your email address will not be published. Required fields are marked *

You may have missed

error: Content is protected !!