ಸುಳ್ಯ: ಕಾನೂನು ಅರಿವು ನೆರವು ಶಿಬಿರದ ಸಹಕಾರಿಗಳಿಗೆ ಅಭಿನಂದನೆ ಮತ್ತು ಧ್ವನಿ ಸುರುಳಿ ಬಿಡುಗಡೆ
ಸುಳ್ಯ: ಕಾನೂನು ಸೇವೆಗಳ ಸಮಿತಿ ಸುಳ್ಯ ತಾಲ್ಲೂಕು, ವಕೀಲರ ಸಂಘ ಸುಳ್ಯ, ವಿವಿಧ ಸರಕಾರಿ ಇಲಾಖೆಗಳು ಮತ್ತು ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಯ ಸಹಯೋಗದಲ್ಲಿ ಅಕ್ಟೋಬರ್ 2 ರಿಂದ ನವೆಂಬರ್ 14 ರ ವರೆಗೆ ನಡೆದ ಕಾನೂನು ಅರಿವು ನೆರವು ಶಿಬಿರದ ಸಮಾರೋಪ ಸಮಾರಂಭ ನ.14 ರಂದು ನಡೆದಿದ್ದು, ಈ ಶಿಬಿರಕ್ಕೆ ಸಹಕಾರ ನೀಡಿದವರಿಗೆ ಅಭಿನಂದನೆ ಹಾಗೂ ಧ್ವನಿಸುರುಳಿ ಅನಾವರಣ ಕಾರ್ಯಕ್ರಮ ನವೆಂಬರ್ 18 ರಂದು ಸುಳ್ಯದ ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಸುಳ್ಯ ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಗೌಡರು ವಹಿಸಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ್ದಲ್ಲದೆ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿ, ಸಹಕರಿಸಿದವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುರಳೀಧರ ಪೈ ಯವರು ” ಸುಳ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಇಲ್ಲಿಯ ನ್ಯಾಯಾಧೀಶರು ಮತ್ತು ವಕೀಲರ ಸಂಘದವರು, ಎಲ್ಲರೊಟ್ಟಿಗೆ ಸೇರಿ ನೆರವೇರಿಸಿದ್ದಾರೆ. ಅವರೆಲ್ಲರೂ ಅಭಿನಂದನೆಗೆ ಅರ್ಹರು. ಇದುವರೆಗೆ ನೀವೆಲ್ಲಾ ನೀಡಿದಂಥ ಕಾನೂನು ಸೇವೆಯನ್ನು ಪಡೆದುಕೊಳ್ಳಲೆಂದು ಜನ ಬಂದಾಗ ಅವರಿಗೆ ಸ್ಪಂದಿಸಿ ಸಹಕಾರ ನೀಡುವಂತಹ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ” ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ರವರು “ಉಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಕಾನೂನು ಅರಿವು ಶಿಬಿರ ಸಂಘಟಿಸಲಾಗಿದೆ. ಇದಕ್ಕೆ ಹತ್ತಾರು ಮಂದಿ ಸಹಕಾರ ನೀಡಿದ್ದಾರೆ. ಅವರೆಲ್ಲರನ್ನು ಸ್ಮರಿಸಿ ಅಭಿನಂದಿಸುವುದು ಕರ್ತವ್ಯ ಎಂಬ ದಿಸೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.
ಅಕ್ಟೋಬರ್ 2 ರಿಂದ ಇದುವರೆಗೆ 39 ಕಾರ್ಯಕ್ರಮ ನಡೆದಿದ್ದು, ಅವುಗಳ ಸಿ.ಡಿ. ರಚಿಸಲಾಗಿದೆ. ಎಲ್ಲ ಕಾರ್ಯಕ್ರಮಗಳ ಭಾವಚಿತ್ರಗಳನ್ನು ಮತ್ತು ಕಾನೂನು ಅರಿವು ಗೀತೆಗಳನ್ನು ಈ ಸೀಡಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದರ ಪ್ರದರ್ಶನವನ್ನು ಕಾರ್ಯಕ್ರಮದ ಮಧ್ಯೆ ಮಧ್ಯೆ ಮಾಡಲಾಯಿತು. ಸುಳ್ಯದ ಸಿವಿಲ್ ನ್ಯಾಯಾಧೀಶ ಯಶವಂತ ಕುಮಾರ್, ತಹಶೀಲ್ದಾರ್ ಕು.ಅನಿತಾಲಕ್ಷ್ಮಿ, ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ, ಇಲಾಖಾಧಿಕಾರಿಗಳಾದ ಬಿ.ಇ.ಒ .ಎಸ್ ಪಿ ಮಹದೇವ್, ಸಿ.ಡಿ.ಪಿ.ಒ. ಶ್ರೀಮತಿ ರಶ್ಮಿ ನೆಕ್ರಾಜೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ಎಪಿಪಿ ಜನಾರ್ದನ್ ಉಪಸ್ಥಿತರಿದ್ದರು.
ತಹಶೀಲ್ದಾರ್ ಕುಮಾರಿ ಅನಿತಾ ಲಕ್ಷ್ಮಿ, ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ, ವೈದ್ಯಾಧಿಕಾರಿ ಡಾ. ನಂದ ಕುಮಾರ್, ರೇಂಜರ್ ಗಿರೀಶ್ ಗೌಡ, ಸಬ್ ಇನ್ ಸ್ಪೆಕ್ಟರ್ ಗಳಾದ ದಿಲೀಪ್, ಆಂಜನೇಯ ರೆಡ್ಡಿ ಮತ್ತು ಜಂಭು ಮಹಾರಾಜ್, ಬಿಇಒ ಎಸ್ ಪಿ ಮಹದೇವ್, ಸಿಡಿಪಿಒ ರಶ್ಮಿ ನೆಕ್ರಾಜೆ, ಸುದ್ದಿ ಬಿಡುಗಡೆಯ ಸಂಪಾದಕರಾದ ಡಾ. ಯು ಪಿ ಶಿವಾನಂದ್, ಬೆಳ್ಳಾರೆ ವೈದ್ಯಾಧಿಕಾರಿ ಡಾ. ಗಿರೀಶ್, ಸುದ್ದಿಯ ವರದಿಗಾರ ಹಸೈನಾರ್ ಜಯನಗರ, ಕೆವಿಜಿ ಲಾ ಕಾಲೇಜು ಪ್ರಾಂಶುಪಾಲ ಜಯರಾಮ ನಾಯ್ಕ್, ಸಾಂದೀಪ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಹರಿಣಿ ಸದಾಶಿವ, ಗಾಯಕರಾದ ಕೃಷ್ಣರಾಜ ಮತ್ತು ಪೂರ್ಣಿಮಾ ದಂಪತಿ, ವಕೀಲ ಸಂಘದ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ಹಿರಿಯ ನ್ಯಾಯವಾದಿಗಳಾದ ರವೀಂದ್ರನಾಥ ರೈ, ಜಗದೀಶ್ ಹುದೇರಿ, ನಾರಾಯಣ ಕೆ., ನಳಿನ್ ಕುಮಾರ್ ಕೋಡ್ತುಗುಳಿ ಮೊದಲಾದವರನ್ನು ಸನ್ಮಾನಿಸಲಾಯಿತು.
ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ನ್ಯಾಯವಾದಿಗಳಾದ ಭಾಸ್ಕರ್ ರಾವ್, ಕೇಶವ ಭಟ್, ಸುಧಾಕರ ನೆಟ್ಟಾರು, ದೀಪಕ್ ಕುತ್ತಮೊಟ್ಟೆ, ಶಾಂ ಪಾನತ್ತಿಲ, ಸತೀಶ್ ಕುಂಭಕೋಡು, ಪ್ರದೀಪ್ ಕೆ.ಎಲ್., ನಾಗೇಶ ಸಿ., ವಿನಯಕುಮಾರ್ ಮುಳುಗಾಡು, ದಿನೇಶ್ ನಳಿಯಾರು, ಶ್ರೀಹರಿ ಕುಕ್ಕುಡೇಲು, ಜಗದೀಶ ಡಿ ಪಿ., ಸಂದೀಪ್, ಗುರುಚರಣ್, ಮಧುಸೂದನ ಕಾಪಿಕಾಡು, ಸುಕುಮಾರ್ ಕೋಡ್ತುಗುಳಿ ಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ವಕೀಲರ ಸಂಘದ ವತಿಯಿಂದ ಇಬ್ಬರು ನ್ಯಾಯಾಧೀಶರುಗಳಾದ ಸೋಮಶೇಖರ್ ಮತ್ತು ಯಶವಂತ ಕುಮಾರ್ ರವರನ್ನು ಸನ್ಮಾನಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಯಶವಂತ ಕುಮಾರ್ ಸ್ವಾಗತಿಸಿ, ನ್ಯಾಯವಾದಿ ವಿನಯ ಕುಮಾರ್ ಮುಳುಗಾಡು ವಂದಿಸಿದರು. ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಸನ್ಮಾನಿತರ ಪರವಾಗಿ ಮಾತನಾಡಿದರು. ಹಿರಿಯ ನ್ಯಾಯವಾದಿ ದಳ ಸುಬ್ರಾಯ ಭಟ್ ಹಾಗೂ ದೀಪಕ್ ಕುತ್ತಮೊಟ್ಟೆ ಕಾರ್ಯಕ್ರಮ ನಿರೂಪಿಸಿದರು.










