ಮಂಗಳೂರು: ಜುವೆಲ್ಯರಿ ಸಿಬ್ಬಂದಿಯ ಕೊಲೆ ಪ್ರಕರಣ: ಶಂಕಿತ ಆರೋಪಿಯ ಸಿಸಿಟಿವಿ ಚಿತ್ರವನ್ನು ಬಿಡುಗಡೆ ಮಾಡಿದ ಪೊಲೀಸ್ ಇಲಾಖೆ
ಮಂಗಳೂರು: ನಗರದ ಹಂಪನ ಕಟ್ಟೆಯ ಜುವೆಲ್ಯರಿಯೊಂದರಲ್ಲಿ ಕಳೆದ ಶುಕ್ರವಾರ ಹಾಡುಹಗಲೇ ನಡೆದ ಸಿಬ್ಬಂದಿ ಕೊಲೆ, ಅಂಗಡಿ ದರೋಡೆ ಪ್ರಕರಣದ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಶಂಕಿತ ಆರೋಪಿಯ ಸಿಸಿ ಕೆಮರಾ ಚಿತ್ರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಕಪ್ಪು ಬಣ್ಣದ ಜರ್ಕಿನ್, ಜೀನ್ಸ್ ಪ್ಯಾಂಟ್ ಧರಿಸಿ, ಶೂ ಧರಿಸಿದ್ದು, ಹೆಗಲಿನಲ್ಲಿ ಬ್ಯಾಗ್ ಹಾಕಿಕೊಂಡಿದ್ದು, ಗುರುತು ಮರೆಮಾಚಲು ಕ್ಯಾಪ್, ಮಾಸ್ಕ್, ಕೂಲಿಂಗ್ ಗ್ಲಾಸ್ ಧರಿಸಿಕೊಂಡಿರುವ ಶಂಕಿತ ಆರೋಪಿಯ ಸಿಸಿ ಕೆಮರಾದಲ್ಲಿ ಸೆರೆ ಸಿಕ್ಕ ಪೋಟೋ ಬಿಡುಗಡೆಗೊಳಿಸಿದ್ದಾರೆ
ಈ ವ್ಯಕ್ತಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಅದನ್ನು ಪೊಲೀಸರಿಗೆ ನೀಡುವಂತೆ ಕೋರಲಾಗಿದ್ದು ಮಾಹಿತಿದಾರರ ಗೌಪ್ಯತೆ ಕಾಪಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಸಂಪರ್ಕಿಸಿಬೇಕಾದ ಪೊಲೀಸ್ ಅಧಿಕಾರಿಗಳು: ಪಿ ಎ ಹೆಗಡೆ -ಎಸಿಪಿ ಸಿಸಿಬಿ, ಮಂಗಳೂರು ನಗರ -ಮೊ: 9945054333, ಮಹೇಶ್ ಕುಮಾರ್ , ಎಸಿಪಿ ಕೇಂ ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.





