ಮೊಟ್ಟೆ ಬಳಸಿ ಮಾಡುವ ‘ಮಯೋನೆಸ್’ ಅನ್ನು ನಿಷೇಧಿಸಿದ ಕೇರಳ ಸರ್ಕಾರ
ಕೇರಳ: ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ದೂರುಗಳು ಮತ್ತು ವಿಷಯುಕ್ತ ಆಹಾರದಿಂದ ಸಾವುಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಕೇರಳ ಸರ್ಕಾರವು ಬೇಯಿಸದ ಮೊಟ್ಟೆ ಬಳಸಿ ಮಾಡುವ ‘ಮಯೋನೆಸ್’ ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಸುರಕ್ಷತೆ ಮತ್ತು ಆರೋಗ್ಯ ಕಾಳಜಿಯ ನಡುವೆ ಕೇರಳ ಸರ್ಕಾರ ಶುಕ್ರವಾರ ಅಡುಗೆ ಸೇವೆ ಅಥವಾ ಕ್ಯಾಟ್ರಿಂಗ್ ಸೇವೆ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಅಡುಗೆ ಸೇವೆಗಳಿಗಾಗಿ ಕೇರಳ ಆರೋಗ್ಯ ಇಲಾಖೆ ಹೊರಡಿಸಿದ ಹೊಸ ನಿಯಮಗಳ ಪ್ರಕಾರ, ಅಡುಗೆ ಸೇವೆಗಳಿಗೆ ಪರವಾನಗಿಯನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಉದ್ಯೋಗಿಗಳಿಗೆ ಆರೋಗ್ಯ ಕಾರ್ಡ್ ಕಡ್ಡಾಯವಾಗಿದೆ. ಕೇರಳದ ಆರೋಗ್ಯ ಇಲಾಖೆಯು ಹಸಿ ಮೊಟ್ಟೆಗಳಿಂದ (ಮಾಂಸಾಹಾರಿ ಮೇಯನೇಸ್) ತಯಾರಿಸಿದ ಮೇಯನೇಸ್ ಅನ್ನು ಸಹ ಬಳಸುವುದನ್ನು ನಿಷೇಧಿಸಿದೆ.
ಪಾಶ್ಚರೀಕರಿಸಿದ ಮೊಟ್ಟೆಗಳನ್ನು ಮೇಯನೇಸ್ ತಯಾರಿಸಲು ಬಳಸಬಹುದು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.