August 12, 2026

ಪುತ್ತೂರು: ಬಾಡಿಗೆ ಮನೆಯಿಂದ ಇನ್ ವರ್ಟರ್ ಬ್ಯಾಟರಿ, ನಗದು ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

0
image_editor_output_image2001590349-1673361260095

ಪುತ್ತೂರು: ಇಲ್ಲಿನ ಸೂತ್ರಬೆಟ್ಟು ಬಾಡಿಗೆ ಮನೆಯೊಂದರಿಂದ ಟಿ.ವಿ ಮತ್ತು ಇನ್ ವರ್ಟರ್ ಬ್ಯಾಟರಿ, ನಗದು ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೂರ್ನಡ್ಕದ ಮಹಮ್ಮದ್ ಮುಸ್ತಫಾ ಮತ್ತು ಸವಣೂರು ಚಾಪಳ್ಳದ ಶಮೀರ್ ಬಂಧಿತ ಆರೋಪಿಗಳು.

ಸೂತ್ರಬೆಟ್ಟುವಿನ ಟಿ. ಗೋಪಿ ಎಂಬವರ ಮನೆಗೆ ನುಗ್ಗಿ ಟಿವಿ, ಇನ್ವರ್ಟರ್ ಬ್ಯಾಟರಿ, ಇಸ್ತ್ರಿ ಪೆಟ್ಟಿಗೆ ಮತ್ತು ಹಣ ಕಳವುಗೈದ ಖದೀಮರು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆಕ್ಟಿವಾ ಹಾಗೂ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಈ ಮೊದಲೇ ಪುತ್ತೂರು ನಗರ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಹಲವು ಕಳವು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!