February 3, 2026

ಕುಂದಾಪುರ: ಹೊತ್ತಿ ಉರಿದ ಫ್ಯಾನ್ಸಿ ಅಂಗಡಿ: 70 ಲಕ್ಷ ರೂ. ಮೌಲ್ಯದ ಸೊತ್ತು ಭಸ್ಮ

0
IMG-20230110-WA0032.jpg

ಕುಂದಾಪುರ: ಕೋಟೇಶ್ವರದಲ್ಲಿ ಫ್ಯಾನ್ಸಿ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಕೋಟೇಶ್ವರದ ಪಟ್ಟಾಭಿ ದೇವಸ್ಥಾನದ ಸಮೀಪದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಮಹಾಲಕ್ಷ್ಮೀ ಬ್ಯಾಂಗಲ್ಸ್ ಎನ್ನುವ ಫ್ಯಾನ್ಸಿ ಅಂಗಡಿಯಲ್ಲಿ ಘಟನೆ ಸಂಭವಿಸಿದೆ. ಸ್ಥಳೀಯರು ಪಂಪ್ ಮೂಲಕ ನೀರು ಹಾಕಿ ನಂದಿಸಲು ಯತ್ನಿಸಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳವೂ ಆಗಮಿಸಿದೆ. ಆದರೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಅಂಗಡಿಯೊಳಗಿನ ಪ್ಲಾಸ್ಟಿಕ್ ಹಾಗೂ ನೈಲಾನ್ ವಸ್ತುಗಳಿಗೆ ಹಿಡಿದ ಬೆಂಕಿಯ ಕೆನ್ನಾಲಿಗೆಗೆ ಅಂಗಡಿ ಸುಟ್ಟು ಭಸ್ಮವಾಗಿದೆ.

ಶೇಖರ ಪೂಜಾರಿ ಎಂಬವರ ಮಾಲೀಕತ್ವದ ಕಟ್ಟಡ ಇದಾಗಿದ್ದು ಜೋಗಿ ಎಂಬವರು ಅಂಗಡಿ ನಡೆಸುತ್ತಿದ್ದರು. ಮಂಗಳವಾರ ಮಧ್ಯಾಹ್ನ ಊಟಕ್ಕೆ ಹೋದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದೆಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!