February 3, 2026

ವಿಟ್ಲ: ಎರಡು ಬೈಕ್ ಗಳ ನಡುವೆ ಢಿಕ್ಕಿ: ಓರ್ವ ಸವಾರ ಗಂಭೀರ

0
InShot_20230110_204156105.jpg

ವಿಟ್ಲ: ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದು ಬೈಕಿನ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ಸಂಭವಿಸಿದೆ.

ವಿಟ್ಲ ಕಡೆಯಿಂದ ಕುದ್ದುಪದವು ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಕುದ್ದುಪದವು ಕಡೆಯಿಂದ ಬರುತ್ತಿದ್ದ ಇನ್ನೊಂದು ಬೈಕ್ ನ ನಡುವೆ ಅಪಘಾತ ಸಂಭವಿಸಿದೆ.

ಒಂದು ಬೈಕಿನಲ್ಲಿ ಕುದ್ದುಪದವು ವೈದ್ಯರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅವರು ಅಪಾಯದಿಂದ ಪಾರಾಗಿದೆ.‌ ಇನ್ನೊಂದು ಬೈಕಿನಲ್ಲಿದ್ದ ಬಳ್ಳೂರು ನಿವಾಸಿಗಳೆಂದು ತಿಳಿದು ಬಂದಿದ್ದು, ಇಬ್ಬರ ಪೈಕಿ ಸಹಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!