“ಯಶಸ್ವಿನಿ ಆರೋಗ್ಯ ರಕ್ಷಣ ಯೋಜನೆ” ಸದಸ್ಯತ್ವ ನೋಂದಣಿ ಅವಧಿ ಜ. 31ರವರೆಗೆ ವಿಸ್ತರಣೆ
ಬೆಂಗಳೂರು: ಯಶಸ್ವಿನಿ ಆರೋಗ್ಯ ರಕ್ಷಣ ಯೋಜನೆಯಡಿ ಸದಸ್ಯತ್ವ ನೋಂದಣಿ ಅವಧಿಯನ್ನು ಜ. 31ರ ವರೆಗೆ ವಿಸ್ತರಿಸಿ ಸಹಕಾರ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಉದ್ದೇಶಿತ ಯೋಜನೆ ಜಾರಿ ಮತ್ತು ಹೊಸ ಸದಸ್ಯತ್ವ ನೋಂದಣಿಗೆ 2022ರ ಡಿ. 31 ಕೊನೆಯ ದಿನವಾಗಿತ್ತು.
ಆದರೆ ಈ ಅವಧಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸದಸ್ಯ ನೋಂದಣಿ ಸಾಧ್ಯವಾಗಿಲ್ಲ. ಅಲ್ಲದೆ ಅನೇಕ ಸಹಕಾರ ಸಂಘಗಳ ಸದಸ್ಯರು, ಸಹಕಾರಿಗಳು, ವಿಧಾನಸಭೆ ಮತ್ತು ಪರಿಷತ್ತಿನ ಶಾಸಕರು ನೋಂದಣಿ ಅವಧಿ ವಿಸ್ತರಣೆಗೆ ಮನವಿ ಮಾಡಿದ್ದಾರೆ.




