May 14, 2026

ಗ್ರಿಲ್ಡ್ ಚಿಕನ್ ಸೇವಿಸಿದ ನರ್ಸ್ ಮೃತ್ಯು

0
image_editor_output_image761230913-1672725909501.jpg

ಕೊಟ್ಟಾಯಂ: ಸ್ಥಳೀಯ ರೆಸ್ಟೋರೆಂಟ್ ಒಂದರಲ್ಲಿ ಸೇವಿಸಿದ ಆಹಾರ ವಿಷಯುಕ್ತವಾಗಿದ್ದ ಪರಿಣಾಮ ನರ್ಸ್ ಸಾವನ್ನಪಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ರೇಶ್ಮಿ (33) ಮೃತ ಮಹಿಳೆ. ರೇಶ್ಮಿ ಆಸ್ಪತ್ರೆಯ ಮೂಳೆಚಿಕಿತ್ಸೆ ವಿಭಾಗದ ತೀವ್ರ ನಿಗಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ರೇಶ್ಮಿ ಅವರು ಸ್ಥಳೀಯ ರೆಸ್ಟೋರೆಂಟ್ ಅಲ್ಫಾಮ್ (ಅರೇಬಿಕ್ ಗ್ರಿಲ್ಡ್ ಚಿಕನ್) ಸೇವಿಸಿದ ಒಂದು ಗಂಟೆಯೊಳಗೆ, ವಾಂತಿ ಮತ್ತು ಅತಿಸಾರ ಆರಂಭವಾಗಿ ಅಸ್ವಸ್ಥಗೊಂಡಿದ್ದಾರೆ.

ಬಳಿಕ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಭಾನುವಾರದಂದು ಆಕೆಯ ಆರೋಗ್ಯವು ಹದಗೆಟ್ಟಿದ್ದರಿಂದ ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

“ಹೋಟೆಲ್ ಪರವಾನಗಿ ಅಮಾನತುಗೊಳಿಸಲಾಗಿದ್ದು, ಮೇಯನೇಸ್ ಆಹಾರ ವಿಷಕ್ಕೆ ಕಾರಣವಾಗಿರಬಹುದು” ಎಂದು ಇಲಾಖೆಯಿಂದ ವಿವರವಾದ ತನಿಖೆ ನಡೆಸಲಾಗುವುದು ಎಂದು ರಾಜ್ಯ ಆಹಾರ ಸುರಕ್ಷತಾ ಸಹಾಯಕ ಆಯುಕ್ತ (ಕೊಟ್ಟಾಯಂ), ರಂದೀಪ್ ಸಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!