December 12, 2024

ಉಳ್ಳಾಲ: ತಲೆನೋವು, ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿ ಮೃತ್ಯು

0

ಉಳ್ಳಾಲ: ಕಳೆದೆರಡು ದಿವಸಗಳಿಂದ ತಲೆನೋವು,ಜ್ವರದಿಂದ ಬಳಲುತ್ತಿದ್ದ ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಶ್ವಿತ್ ಇಂದು ಸಾವನ್ನಪ್ಪಿದ್ದು,ಬಾಲಕ ಮೆದುಳು ಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಎರಡು ದಿನಗಳಿಂದ ಜ್ವರ , ತಲೆನೋವು ಎನ್ನುತ್ತಿದ್ದ ಅಶ್ವಿತ್ ನಾಳೆ ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಸ್ಕಿಟ್ ನಲ್ಲೂ ಭಾಗವಹಿಸಲು ತಯಾರಿ ನಡೆಸಿದ್ದ.ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಶಾಲಾ ಆಡಳಿತ ಮಂಡಳಿ ,ಕುಟುಂಬ ಹಾಗೂ ಸ್ಥಳೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಎರಡು ವರ್ಷಗಳ ಹಿಂದೆ ಅಶ್ವಿತ್ ನ ತಂದೆ ಅವಘಡವೊಂದರಲ್ಲಿ ಸಾವನ್ನಪ್ಪಿದ್ದರು.ಕೊಲ್ಯ ಸಾರಸ್ವತ ಕಾಲನಿಯ ಮನೆಯಲ್ಲಿ ಅಶ್ವಿತ್ ತಾಯಿಯೊಂದಿಗೆ ವಾಸವಿದ್ದ.ಅಶ್ವಿತ್ ಶಾಲೆಯಲ್ಲೂ ಪ್ರತಿಭಾನ್ವಿತನಾಗಿದ್ದು ಶಿಕ್ಷಕರ ಪ್ರೀತಿ ಪಾತ್ರನಾಗಿದ್ದ.

 

 

Leave a Reply

Your email address will not be published. Required fields are marked *

error: Content is protected !!