ಯುವಕನಿಗೆ ಬೆದರಿಕೆ ಹಾಕಲೆಂದೇ ಗ್ಯಾಂಗ್ ನೊಂದಿಗೆ 450 ಕಿ.ಮೀ. ಪ್ರಯಾಣ ಬೆಳೆಸಿರುವ ಟಿಕ್ ಟಾಕ್ ತಾರೆ
ಸೂರತ್: ಟಿಕ್‌ಟಾಕ್ ತಾರೆ ತನ್ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಜಗಳವಾಡಿದ್ದ ಯುವಕನಿಗೆ ಬೆದರಿಕೆ ಹಾಕಲೆಂದೇ 450 ಕಿಮೀ ಪ್ರಯಾಣ ಬೆಳೆಸಿರುವ ಘಟನೆ ಬೆಳಕಿಗೆ ಬಂದಿದೆ.
ಸೂರತ್‌ನ ಟಿಕ್‌ಟಾಕ್ ತಾರೆ ಕೀರ್ತಿ ಪಟೇಲ್ ತನ್ನ ಸಹಚರರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಬೆದರಿಕೆ ಹಾಕಲು 450 ಕಿಮೀ ತೆರಳಿದ್ದಾಳೆ. ಆದ್ರೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ಕೈಮೀರುವ ಮುನ್ನವೇ ಕೀರ್ತಿ ಪಟೇಲ್ ಹಾಗೂ ಇತರ 9 ಮಂದಿ ಸಹಚರರನ್ನ ಬಂಧಿಸಿದ್ದಾರೆ.





