February 3, 2026

ಮನೆಕೆಲಸಕ್ಕೆಂದು ಕರೆಸಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

0
image_editor_output_image-918126708-1671527490972.jpg

ಬೆಂಗಳೂರು: ಪೋಷಕರು ಮತ್ತು ಸಾಕು ನಾಯಿ ನೋಡಿಕೊಳ್ಳಲು “ಬುಕ್‌ಮೈಭಾಯಿ. ಕಾಂ’ ಎಂಬ ವೆಬ್‌ಸೈಟ್‌ ಮೂಲಕ ಯುವತಿ ಯನ್ನು ಮನೆಗೆ ಕರೆಸಿಕೊಂಡ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ. ಕೂಡ್ಲು ನಿವಾಸಿ ಪರಶಿವಮೂರ್ತಿ (47) ಬಂಧಿತ. ಆರೋಪಿ. ಈತ ನ.30ರಂದು ಉತ್ತರ ಭಾರತ ಮೂಲದ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದನು. ಈ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಯನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದರು.

Leave a Reply

Your email address will not be published. Required fields are marked *

error: Content is protected !!