December 16, 2025

ಜೈಲಿನಲ್ಲಿ ಗುಂಡಿನ ಕಾಳಗ:
68 ಮಂದಿ ಮೃತ್ಯು, 25 ಮಂದಿ ಗಾಯ

0
image_editor_output_image800885271-1636952359892.jpg

ಕ್ವಿಟೊ: ದಕ್ಷಿಣ ಅಮೇರಿಕಾ ಖಂಡದ ದೇಶವಾಗಿರುವ ಈಕ್ವಡೋರ್‌ನ ಕರಾವಳಿ ನಗರ ಗಯಾಕ್ವಿನ್‌‌ನಲ್ಲಿರುವ ಅತಿದೊಡ್ಡ ಜೈಲಿನಲ್ಲಿ ಗುಂಡಿನ ಕಾಳಗ ನಡೆದಿದ್ದು, 68 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ.

ಗಯಾಸ್ ಪ್ರಾಂತ್ಯದ ಗವರ್ನರ್‌ ಪಬ್ಲೋ ಅರಸೊಮೆನ ಈ ಬಗ್ಗೆ ಮಾಹಿತಿ ನೀಡಿದ್ದು, “ಅಂತರಾಷ್ಟ್ರೀಯ ಡ್ರಗ್ಸ್‌‌ ಪ್ರಕರಣಗಳಲ್ಲಿ ಶಾಮೀಲಾಗಿರುವ ಆರೋಪಿಗಳ ನಡುವಿನ ಗ್ಯಾಂಗ್‌ವಾರ್‌ ಹಿನ್ನೆಲೆ ಈ ಗುಂಡಿನ ಕಾಳಗ ನಡೆದಿದೆ” ಎಂದಿದ್ದಾರೆ.

ಈ ಗುಂಡಿನ ಕಾಳಗ ಶನಿವಾರ ಆರಂಭವಾಗಿದ್ದು, ಇದನ್ನು ನಿಯಂತ್ರಿಸಲು 700ರಷ್ಟು ಪೊಲೀಸರು ಯತ್ನಿಸುತ್ತಿದ್ದಾರೆ. ಆದರೆ, ಇದು ಇನ್ನೂ ಕೂಡಾ ನಿಯಂತ್ರಣಕ್ಕೆ ಬಂದಿಲ್ಲ. ಇದೇ ಜೈಲಿನಲ್ಲಿ ಸೆಪ್ಟೆಂಬರ್‌‌‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ 119 ಮಂದಿ ಸಾವನ್ನಪ್ಪಿದ್ದರು.

Leave a Reply

Your email address will not be published. Required fields are marked *

error: Content is protected !!