February 3, 2025

ವಿಟ್ಲ: ಕರೆಂಟ್ ಶಾಕ್ ಹೊಡೆದು ಯುವಕ ಮೃತ್ಯು: ಹಂದಿ ಹಿಡಿಯಲು ಗದ್ದೆಯಲ್ಲಿ ವಿದ್ಯುತ್ ಅಳವಡಿಕೆ ಆರೋಪ

0

ವಿಟ್ಲ: ಕರೆಂಟ್‌ ಶಾಕ್‌ ಹೊಡೆದು ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಅಡ್ಯನಡ್ಕದ ಸಾಯ ಎಂಬಲ್ಲಿ ನಡೆದಿದೆ.

ಎಣ್ಮಕಜೆ ಪಂಚಾಯತ್ ನ ಅಡ್ಯನಡ್ಕ ಸಮೀಪದ ಒಂದನೇ ವಾರ್ಡ್ ಸಾಯ ಎಂಬಲ್ಲಿ ನಿನ್ನೆ ರಾತ್ರಿ ನಡೆದ ವಿದ್ಯುತ್ ದುರ್ಘಟನೆಯಲ್ಲಿ ಸಾಯ ನಿವಾಸಿ ನಾರಾಯಣ ನಾಯ್ಕ್ ಎಂಬವರ ಪುತ್ರ ಜಿತೇಶ್ (17) ಎಂಬ ಬಾಲಕ ದಾರುಣ ಸಾವನ್ನಪ್ಪಿದ್ದಾನೆ.

ಹಂದಿ ಹಿಡಿಯಲು ಅಕ್ರಮವಾಗಿ ಗದ್ದೆಯಲ್ಲಿ ವಿದ್ಯುತ್ ಅಳವಡಿಸುರುವುದೇ ಕಾರಣವಾಗಿದೆ ಎಂದು ನಾಗರಿಕ ವಲಯದಲ್ಲಿ ಸಂಶಯ ವ್ಯಕ್ತವಾಗಿದ್ದು , ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

ವಿಟ್ಲ ಸಮುದಾಯ ಆಸ್ಪತ್ರೆಯ ಶವಗಾರದಲ್ಲಿ ಮೃತ ದೇಹ ಇರಿಸಲಾಗಿದೆ. ಕೇರಳ ಪೊಲೀಸರು ವಿಟ್ಲಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!