ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ
ಕಲ್ಲಡ್ಕ: ನವಂಬರ್ 26, 2022ರಂದು ಅನುಗ್ರಹ ಮಹಿಳಾ ಕಾಲೇಜು, ಕಲ್ಲಡ್ಕದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಯಿತು. ಕಿರಾಅತ್ ಪಠಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪಿಯುಸಿ ಮತ್ತು ಪದವಿಯ ನಾಲ್ಕು ಮನೆಯ ವಿದ್ಯಾರ್ಥಿಗಳಿಂದ ಸುಂದರ ಪಥ ಸಂಚಲನ ನಡಿಯಿತು .
ಮುಖ್ಯ ಅತಿಥಿಯಾಗಿ ಆಗಮಿಸಿದ ಅನುಗ್ರಹ ಎಜುಕೇಶನಲ್ ಟ್ರಸ್ಟ್‌ನ ಸಂಚಾಲಕರಾದ ಶ್ರೀಯುತ ಅಮಾನುಲ್ಲಾ ಖಾನ್‌ರವರು ಬಲೂನುಗಳನ್ನು ಹಾರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು ಕ್ರೀಡೆಗಳು ವಿದ್ಯಾರ್ಥಿನಿಯರ ಶಿಸ್ತು, ಸಂಯಮ,ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಕೋಶಾಧಿಕಾರಿ ಶ್ರೀಯುತ ಹೈದರ್ ಅಲಿಯವರು, ಪ್ರತಿಯೊಬ್ಬರು ಕ್ರೀಡೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿ ಆರೋಗ್ಯಕರ ಸಮಾಜಕ್ಕೆ ಕೊಡುಗೆ ನೀಡಿ ಎಂದು ಪ್ರೇರೇಪಿಸಿದರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಶ್ರೀಯುತ ಇಬ್ರಾಹಿಂ ಚೆಂಡಾಡಿ ಮತ್ತು ಶ್ರೀಯುತ ಅಬ್ದುಲ್ಲಾ ಚೆಂಡಾಡಿ, ಟ್ರಸ್ಟ್‌ನ ಸದಸ್ಯರಾದ ಅಬ್ದುಲ್ಲಾ ಕುಂಞ, ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಬಿ.ಡಿ. ಮತ್ತು ಉಪಪ್ರಾಂಶುಪಾಲರಾದ ಮಮಿತಾ ಎಸ್, ರೈ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ನಂತರ ಪಿಯುಸಿ ಮತ್ತು ಪದವಿಯ ನಾಲ್ಕು ಮನೆ ವಿದ್ಯಾರ್ಥಿಗಳು ಓಟ, ಕಬಡ್ಡಿ, ರಿಲೇ, ತ್ರೋ ಬಾಲ್, ಖೋ ಖೋ, ಶಟಲ್ ಮೊದಲಾದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಮತ್ತು ಬೋಧಕ ವೃಂದದವರು ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳ ಉತ್ತಮ ಸಾಧನೆಗಾಗಿ ಪ್ರಾಂಶುಪಾಲರು ಅಭಿನಂದಿಸಿದರು.
ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ಫಾತಿಮಾ ಸಫ್ರತ್ ಕಿರಾತ್ ಪಠಿಸಿ, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಕುಮಾರಿ ಫಾತಿಮಾ ಸ್ವಾಗತಿಸಿ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕುಮಾರಿ ಮಶಿದ ವಂದಿಸಿ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಕುಮಾರಿ ಹಾಜಿರ ತಫ್ಶೀರಾರವರು ಕಾರ್ಯಕ್ರಮವನ್ನು ನಿರೂಪಿಸಿದರು.