February 3, 2026

ಉಳ್ಳಾಲ: ಯಕ್ಷಗಾನ ಭಾಗವತ ಕೀರ್ತನ್ ಶೆಟ್ಟಿ ವಗೆನಾಡು ನೇಣು ಬಿಗಿದು ಆತ್ಮಹತ್ಯೆ

0
IMG-20221118-WA0032.jpg

ಉಳ್ಳಾಲ: ಯಕ್ಷಗಾನದಲ್ಲಿ ತನ್ನದೇ ಅಭಿಮಾನಿ ಬಳಗ ಹೊಂದಿದ್ದ ಹೆಸರಾಂತ ಯಕ್ಷಗಾನ ಭಾಗವತ ಕೀರ್ತನ್ ಶೆಟ್ಟಿ ವಗೆನಾಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ಯಕ್ಷಗಾನ ಕಲಾವಿದ ಕೀರ್ತನ್ ಶೆಟ್ಟಿ ವಗೆನಾಡು ಆತ್ಮಹತ್ಯೆಗೆ ಶರಣಾದ ದುರ್ದೈವಿ‌. ಮೂಳೂರು ಬಳಿ ಬಾಡಿಗೆ ಮನೆಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೆ ಬಪ್ಪನಾಡು ಹಾಗೂ ಇತರ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದ ಕೀರ್ತನ್, ಕೊರೋನಾ ಸಂದರ್ಭ ಮತ್ತು ನಂತರ ಚಿಕ್ಕಮೇಳದಲ್ಲಿ ಭಾಗವತಿಕೆ ಮಾಡುತ್ತಿದ್ದರು. ದಾಂಪತ್ಯ ಕಲಹ ಹಾಗೂ ಕುಡಿತದ ಚಟ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!