August 12, 2026

ವಿಟ್ಲ: ರಸ್ತೆ ಅಪಘಾತದಲ್ಲಿ ಗಂಭೀರಗೊಂಡಿದ್ದ ಮಹಿಳೆ ಮೃತ್ಯು

0
IMG-20221023-WA0002.jpg

ವಿಟ್ಲ: ಪೆರುವಾಯಿ ರಸ್ತೆ ಅಪಘಾತವೊಂದರಲ್ಲಿ ಗಂಭೀರಗೊಂಡಿದ್ದ ಮಹಿಳೆಯೊಬ್ಬರು ತಿಂಗಳಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆಯೊಂದು ವರದಿಯಾಗಿದೆ.

ಸೀತಾ ಮಡಿವಾಳ ಮೃತಪಟ್ಟ ಮಹಿಳೆಯಾಗಿದ್ದಾರೆ. ಕಳೆದ ತಿಂಗಳು ಪೆರುವಾಯಿ ಗ್ರಾಮದ ಅಡ್ಕದಲ್ಲಿ ನಡೆದಿದ್ದ ಬೈಕ್ ಅಪಘಾತದಲ್ಲಿ ಸೀತಾ ಗಂಭೀರಗಾಯಗೊಂಡಿದ್ದರು. ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸೀತಾ ಅವರು ಕೊಳ್ಳತ್ತಡ್ಕ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!